ಬೆಂಗಳೂರಿನಲ್ಲಿ ಭಾರಿ ಸ್ಫೋಟಕ ಪತ್ತೆ: ಮೂವರ ಬಂಧನ

ಬೆಂಗಳೂರು ;- ನಗರದ ಹಲವೆಡೆ ಭಾರಿ ಪ್ರಮಾಣದ ಸ್ಫೋಟಕ ವಸ್ತು ಪತ್ತೆಯಾಗಿದೆ. ಹಾಗಾಗಿ, ಇವರು ಶಂಕಿತ ಉಗ್ರರ ಜತೆ ನಂಟು ಹೊಂದಿರುವ ಕುರಿತು ಶಂಕೆ ವ್ಯಕ್ತವಾಗಿದೆ.
ಹೆಸರಘಟ್ಟದ ಕಲ್ಲುಗುಡ್ಡದಹಳ್ಳಿ ಹಾಗೂ ದಾಸೇನಹಳ್ಳಿ ಬಳಿಯ ಎರಡು ಮನೆಗಳಲ್ಲಿ ನಗರದ ಸೋಲದೇವನಹಳ್ಳಿ ಪೊಲೀಸರು ಶೋಧ ನಡೆಸಿದ್ದು, ಅನುಮತಿ ಇಲ್ಲದೆ ಮನೆಯಲ್ಲಿ ಆಡಗಿಸಿದ್ದ ಅಪಾರ ಪ್ರಮಾಣದ ಸ್ಫೋಟಕ ವಸ್ತುಗಳನ್ನು ಪತ್ತೆಹಚ್ಚಿದ್ದಾರೆ.
ಎರಡೂ ಮನೆಗಳಲ್ಲಿ ಸ್ಫೋಟಕ ಪತ್ತೆಹಚ್ಚಿರುವ ಪೊಲೀಸರು, ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.
ಕಲ್ಲುಗುಡ್ಡದಹಳ್ಳಿಯ ಶಂಕರ್ ಹಾಗೂ ದಾಸೇನಹಳ್ಳಿ ಬಳಿಯ ಕುಮಾರ್ ಎಂಬುವರ ಮನೆಯಲ್ಲಿ ಸ್ಫೋಟಕ ಪತ್ತೆಯಾಗಿದೆ. ಎರಡೂವರೆ ಕೆ.ಜಿ ಸಲ್ಫರ್ ಪೌಡರ್, 250 ಗ್ರಾಂ ಎಕ್ಸ್ಪ್ಲೋಸಿವ್ ಜೆಲ್, 45 ಕೆ.ಜಿ ಪೊಟ್ಯಾಶಿಯಂ ನೈಟ್ರೇಟ್ ವೈಟ್ ಪೌಡರ್ ಹಾಗೂ ಸ್ಫೋಟಕ ಮದ್ದುಗಳನ್ನು ವಶಪಡಿಸಿಕೊಳ್ಳಲಾಗಿದೆ. ಇಬ್ಬರನ್ನೂ ಪೊಲೀಸರು ಬಂಧಿಸಿದ್ದಾರೆ.
ಅಲ್ಲದೆ, ದಾಸೇನಹಳ್ಳಿಯ ರಾಘವೇಂದ್ರ ಲೇಔಟ್ನ ಮನೆ ಮೇಲೂ ಪೊಲೀಸರು ದಾಳಿ ನಡೆಸಿದ್ದು, ಶ್ರೀನಿವಾಸ್ ಎಂಬುವರ ಬಾಡಿಗೆ ಮನೆಯಲ್ಲಿ ಶೋಧ ನಡೆಸಿದ್ದಾರೆ. ಅಲ್ಲೂ ಕೆ.ಜಿಗಟ್ಟಲೆ ಸ್ಫೋಟಕ ಪತ್ತೆಯಾಗಿದೆ. 1.860 ಕೆ.ಜಿ ತೂಕದ 15 Rex ಎಕ್ಸ್ಪ್ಲೋಸಿವ್ ಜೆಲ್, 1.950 ಗ್ರಾಂ ಕಾರ್ಕೋಲ್ ಪೌಡರ್, 7.850 ಗ್ರಾಂ ಸಲ್ಫರ್ ಪೌಡರ್, 13 ಕೆ.ಜಿ ಪೊಟ್ಯಾಶಿಯಂ ನೈಟ್ರೇಟ್ ಪತ್ತೆಯಾಗಿದೆ. ಶ್ರೀನಿವಾಸ್ನನ್ನೂ ಬಂಧಿಸಿರುವ ಪೊಲೀಸರು, ಎರಡು ಪ್ರತ್ಯೇಕ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ

Loading

Leave a Reply

Your email address will not be published. Required fields are marked *