ಕಳೆದ ಹಲವಾರು ತಿಂಗಳುಗಳಲ್ಲಿ, ಕಚ್ಚಾತೈಲವು ಪ್ರತಿ ಬ್ಯಾರೆಲ್ಗೆ 70 ಡಾಲರ್ನಿಂದ 82 ಡಾಲರ್ ದಾಟಿದೆ. ಆದರೆ ಬೆಲೆಗಳು ಸತತ ಮೂರು ದಿನಗಳವರೆಗೆ ಏರಿಕೆಯಾಗುತ್ತಲೇ ಇದೆ. ಕಚ್ಚಾತೈಲ ಕೂಡ 84 ಡಾಲರ್ ದಾಟಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿನ ಕಚ್ಚಾತೈಲ ಬೆಲೆಯ ಆಧಾರದ ಮೇಲೆ ಮಾತ್ರ ದೇಶದಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಗಳನ್ನು ನಿಗದಿಪಡಿಸಲಾಗುತ್ತದೆ.
ದೇಶದಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಗಳು ಹಾಗೆಯೇ ಇವೆ, ಜುಲೈ 30 ರಂದು ಅವುಗಳ ಬೆಲೆಯಲ್ಲಿ ಯಾವುದೇ ಬದಲಾವಣೆ ಕಂಡುಬಂದಿಲ್ಲ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಜುಲೈ 30ರಂದು ಬ್ರೆಂಟ್ ಕಚ್ಚಾತೈಲದ ಬೆಲೆ ಪ್ರತಿ ಬ್ಯಾರೆಲ್ಗೆ 84.99 ಡಾಲರ್ ಆಗಿದೆ. ಡಬ್ಲ್ಯೂಟಿಐ ಕಚ್ಚಾತೈಲ ಪ್ರತಿ ಬ್ಯಾರೆಲ್ಗೆ 80.58 ರೂ. ಆಗಿದೆ.
ಮಹಾನಗರಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಎಷ್ಟು? ಕೋಲ್ಕತ್ತಾ- ಪೆಟ್ರೋಲ್ 106.03 ರೂ., ಡೀಸೆಲ್ ಲೀಟರ್ಗೆ 92.76 ರೂ. ಬೆಂಗಳೂರು: ಪ್ರತಿ ಲೀಟರ್ ಪೆಟ್ರೋಲ್ 101.94 ರೂ. ಮತ್ತು ಡೀಸೆಲ್ 87.89 ರೂ. ಮುಂಬೈ- ಪೆಟ್ರೋಲ್ 106.31 ರೂ., ಡೀಸೆಲ್ 94.27 ರೂ. ಚೆನ್ನೈ- ಪೆಟ್ರೋಲ್ 102.63 ರೂ., ಡೀಸೆಲ್ ಲೀಟರ್ಗೆ 94.24 ರೂ. ನವದೆಹಲಿ – ಪೆಟ್ರೋಲ್ 96.72 ರೂ., ಡೀಸೆಲ್ ಲೀಟರ್ಗೆ 89.62 ರೂ.