ಅಪ್ಘಾನಿಸ್ತಾನ;- ಮದುವೆ ಸಮಾರಂಭಗಳಲ್ಲಿ ಸಲೂನ್ಗಳು ವಧುವಿನ ಕುಟುಂಬದವರ ಆರ್ಥಿಕ ಹೊರೆಗೂ ಕಾರಣವಾಗುತ್ತಿವೆ. ಸಲೂನ್ ಗಳನ್ನು ಮುಚ್ಚಲು ಈ ಹಿಂದೆ ಒಂದು ತಿಂಗಳ ಗಡುವು ನೀಡಲಾಗಿತ್ತು. ಈ ನಿರ್ಧಾರದ ವಿರುದ್ಧ ಅಲ್ಲಲ್ಲಿ ಕೆಲ ಪ್ರತಿಭಟನೆಗಳು ನಡೆದಿದ್ದವಾದರೂ, ಅದನ್ನೆಲ್ಲ ಹಿಮ್ಮೆಟ್ಟಿಸಿರುವ ಸರ್ಕಾರ ಸಲೂನ್ಗಳಿಗೆ ಬೀಗ ಹಾಕಿಸಿದೆ.
ಒಂದು ವೇಳೆ ಸಲೂನ್ಗಳನ್ನು ಮುಚ್ಚದೇ ಹೋದರೆ, ಸೇನಾ ಬಲ ಪ್ರಯೋಗಿಸಲಾಗುತ್ತದೆಯೇ ಎಂಬುದರ ಬಗ್ಗೆ ಸರ್ಕಾರ ಸ್ಪಷ್ಟವಾಗಿ ಏನನ್ನೂ ಹೇಳಿಲ್ಲ.
ಸರ್ಕಾರದ ಈ ನಿರ್ಧಾರದಿಂದಾಗಿ 60,000 ಮಹಿಳೆಯರ ಜೀವನೋಪಾಯಕ್ಕೆ ತೊಂದರೆಯಾಗಿದೆ ಎಂದು ಮಹಿಳಾ ಹಕ್ಕುಗಳ ಸಂಘಟನೆಗಳು ತಿಳಿಸಿವೆ.
ಈ ನಿರ್ಬಂಧವನ್ನು ಮರುಪರಿಶೀಲಿಸುವಂತೆ ಅಫ್ಗನ್ ಆಡಳಿತದೊಂದಿಗೆ ಮಾತುಕತೆ ನಡೆಸುತ್ತಿರುವುದಾಗಿ ವಿಶ್ವ ಸಂಸ್ಥೆ ತಿಳಿಸಿದೆ.