ಬೆಂಗಳೂರು ;- ನಗರದಲ್ಲಿ ಆಸ್ತಿ ವಿಚಾರಕ್ಕೆ ದಾಯಾದಿಗಳ ನಡುವೆ ಕಲಹವಾಗಿದ್ದು ಲಾಂಗು ಝಳಪಿಸಿದ ಘಟನೆ ಜರುಗಿದೆ.
ಕೆ.ಜಿ. ಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಮುಕ್ತಿ ನಗರದಲ್ಲಿ ಕಳೆದ ಎರಡು ದಿನದ ಹಿಂದೆ ನಡೆದಿರುವ ಘಟನೆ ಈಗ ಬೆಳಕಿಗೆ ಬಂದಿದೆ. ಎರಡೂ ಕುಟುಂಬಗಳು ಪೊಲೀಸ್ ಠಾಣೆಯಲ್ಲಿ ದೂರು ಪ್ರತಿದೂರು ದಾಖಲಿಸಿವೆ.
ಸದ್ಯ ಪೊಲೀಸದರು ಪ್ರತ್ಯೇಕ ಎಫ್ಐಆರ್ ದಾಖಲಿಸಿ ತನಿಖೆಗೆ ಇಳಿದಿದ್ದಾರೆ.
ಒಂದೇ ಏರಿಯಾದ ಅಕ್ಕಪಕ್ಕದಲ್ಲಿ ವಾಸವಾಗಿರುವ ಮುನಿ ಆಂಜಿನಪ್ಪ ಹಾಗೂ ಬಡಿಗಪ್ಪ ಕುಟುಂಬದ ನಡುವೆ ಆಸ್ತಿಗಾಗಿ ಜಗಳವಾಗಿದ್ದು ಎರಡೂ ಕುಟುಂಬಗಳು ಪರಸ್ಪರ ಹಲ್ಲೆ ಮಾಡಿಕೊಂಡಿವೆ. ಹಾಗೂ ಪೊಲೀಸ್ ಠಾಣೆಯಲ್ಲಿ ಒಬ್ಬರ ಕುಟುಂಬದವರ ಮೇಲೆ ಮತ್ತೊಬ್ಬರ ಕುಟುಂಬಗಳ ಹಲ್ಲೆ ಮಾಡಿದ್ದಾಗಿ ದೂರು ಪ್ರತಿದೂರು ದಾಖಲಿಸಿವೆ. ಎರಡೂ ಕುಟುಂಬಗಳ ನಡುವಿನ ಜಗಳ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಆದಿತ್ಯ ಎಂಬಾತ ಲಾಂಗ್ ಹಿಡಿದು ಬಂದು ಧಮ್ಕಿ ಹಾಕಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಹೀಗಾಗಿ ಎರಡು ದೂರುಗಳ ಹಿನ್ನಲೆ ಕೆಜಿ ಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ಎಫ್ಐಆರ್ಗಳು ದಾಖಲಾಗಿವೆ. ಎಫ್ಐಆರ್ ದಾಖಲಿಸಿಕೊಂಡು ಪೊಲೀಸರು ತನಿಖೆಗೆ ಇಳಿದಿದ್ದಾರೆ.