ಹೆಂಡತಿಯ ಕತ್ತು ಹಿಸುಕಿ ಕೊಲೆ ಮಾಡಿ ಹೈಡ್ರಾಮ ಮಾಡಿದ ಗಂಡ

ಬೆಂಗಳೂರು: ಪತ್ನಿಯ ಹತ್ಯೆಗೈದು ಪತಿ ಹೈಡ್ರಾಮ ಮಾಡಿದ್ದಾನೆ. ಕೃತ್ಯ ನಡೆದ ಕೆಲವೇ ಗಂಟೆಗಳಲ್ಲಿ ಅಸಲಿ ಸಂಗತಿ ಬಯಲಾಗಿದ್ದು ಆರೋಪಿಯನ್ನು ವಶಕ್ಕೆ ಪಡೆಯಲಾಗಿದೆ.
ಬಾಣಸವಾಡಿ ಪೊಲೀಸ್ ಠಾಣಾ ವ್ಯಾಪ್ತಿಯ ಹೆಚ್ ಆರ್ ಬಿಆರ್ ಲೇಔಟಲ್ಲಿ ಘಟನೆ ನಡೆದಿದೆ. ಕೆಂಚಮ್ಮ (19) ಕೊಲೆಯಾದವರು. ಕಳೆದ ಆರು ತಿಂಗಳ ಹಿಂದೆ ಸಿದ್ದಪ್ಪ ಬಸವರಾಜ್ ಬೆನ್ನೂರು ಜೊತೆ ಕೆಂಚಮ್ಮ ಮದುವೆಯಾಗಿತ್ತು.
ಮದುವೆಯಾದಗಿನಿಂದಲೂ ಇಬ್ಬರ ನಡುವೆ ಜಗಳ ನಡೆಯುತ್ತಿತ್ತು. ತಡರಾತ್ರಿ 2 ಗಂಟೆಗೆ ಹೆಂಡತಿಯ ಕತ್ತು ಹಿಸುಕಿ ಕೊಲೆ ಮಾಡಿ ನೇಣು ಬೀಗಿದು ಪತಿ ಹೈಡ್ರಾಮ ಮಾಡಿದ್ದಾನೆ. ಕೆಂಚಮ್ಮ ನೇಣುಬಿಗಿದುಕೊಂಡಿದ್ದಾಳೆ ಎಂದು ಸಂಬಂಧಿಕರಿಗೆ ಕರೆ ಮಾಡಿದ್ದಾರೆ.
ಸದ್ಯ ಪೊಲೀಸರ ಪರಿಶೀಲನೆ ವೇಳೆ ಕೊಲೆ ಎಂಬ ಅನುಮಾನ ವ್ಯಕ್ತವಾಗಿದ್ದು ಸಿದ್ದಪ್ಪನನ್ನು ವಿಚಾರಣೆ ನಡೆಸಿದಾಗ ಕೊಲೆ ಮಾಡಿರುವುದು ಬೆಳಕಿಗೆ ಬಂದಿದೆ.

Loading

Leave a Reply

Your email address will not be published. Required fields are marked *