ಬಾರಿ ಮಳೆಗೆ ಕುಸಿದು ಬಿದ್ದ ಮನೆ: ಮನೆಯಲ್ಲಿದ್ದ ತಾಯಿ, ಮಗು ಪ್ರಾಣಾಪಾಯದಿಂದ ಪಾರು

ಹಾಸನ : ರಾಜ್ಯದಲ್ಲಿ ಮುಂಗಾರು ಮಳೆ ಚುರುಕುಗೊಂಡಿದೆ. ಮಳೆ ಅಬ್ಬರಕ್ಕೆ ಅನೇಕ ಜಿಲ್ಲೆಗಳು ತತ್ತರಿಸಿದ್ದು, ಇದೀಗ ವಾಸದ ಮನೆ ಬಾರಿ ಮಳೆಗೆ ಕುಸಿದು ಬಿದ್ದು ಅದೃಷ್ಟವಶಾತ್ ಮನೆಯಲ್ಲಿದ್ದ ತಾಯಿ, ಮಗು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಹಾಸನ ಜಿಲ್ಲೆ, ಸಕಲೇಶಪುರ ಪಟ್ಟಣದ, ಚಂಪಕನಗರದಲ್ಲಿ ಈ ಘಟನೆ ನಡೆದಿದೆ. ಸಚಿನ್ ಎಂಬುವವರಿಗೆ ಸೇರಿದ ಮನೆಯಾಗಿದ್ದು, ಗಾರೆ ಕೆಲಸ ಮಾಡುವ ಸಚಿನ್ ಕೆಲಸಕ್ಕೆ ತೆರಳಿದ್ದರು. ಮನೆಯಲ್ಲಿಯೇ ಇರುತ್ತಿದ್ದ ಸಚಿನ್ ಪತ್ನಿ ಸ್ವಾತಿ ಹಾಗೂ ಮಗು ಮಗುವಿನೊಂದಿಗೆ ಅಂಗಡಿಗೆ ತೆರಳಿದ್ದರು. ಈ ವೇಳೆ ಭಾರಿ ಮಳೆಗೆ ಏಕಾಏಕಿ ಕುಸಿದು ಬಿದ್ದಿದ್ದು, ಸ್ವಾತಿ ಹಾಗೂ ಮಗು ಮನೆಗೆ ವಾಪಾಸ್ ಬರುವಷ್ಟರಲ್ಲಿ ಮನೆ ಕುಸಿದು ಬಿದ್ದಿದೆ. ಸ್ಥಳಕ್ಕೆ ಆರ್ಐ ಮತ್ತು ವಿಎ ಭೇಟಿ, ಪರಿಶೀಲನೆ ನಡೆಸಿದ್ದಾರೆ.

Loading

Leave a Reply

Your email address will not be published. Required fields are marked *