ಅಂತಾರಾಷ್ಟ್ರೀಯ ಕ್ರಿಕೆಟ್ʼಗೆ ಗುಡ್ಬೈ ಹೇಳಿದ ಸ್ಫೋಟಕ ಬ್ಯಾಟರ್ ಆಯೇಶಾ ನಸೀಮ್

ಇಸ್ಲಾಮಾಬಾದ್: ನಾನು ಇನ್ಮುಂದೆ ಇಸ್ಲಾಮಿಕ್ ಧರ್ಮದಂತೆಯೇ ಬದುಕುತ್ತೇನೆ, ಇಸ್ಲಾಮಿಕ್ ತತ್ವ ಬೋಧನೆಯನ್ನ ಅನುಸರಿಸುತ್ತೇನೆ ಎಂದು ಹೇಳಿರುವ ಪಾಕ್ ಮಹಿಳಾ ಕ್ರಿಕೆಟ್ ತಂಡದ ಸ್ಫೋಟಕ ಬ್ಯಾಟರ್ (Pakistani Cricketer) ಆಯೇಶಾ ನಸೀಮ್ (Ayesha Naseem) ತನ್ನ 18ನೇ ವಯಸ್ಸಿಗೆ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ್ದಾರೆ.
ಆರಂಭಿಕ ಹಂತದಿಂದಲೇ ಅದ್ಭುತ ಬ್ಯಾಟಿಂಗ್ ಪ್ರದರ್ಶನ ನೀಡುತ್ತಿದ್ದ ಆಯೇಶಾ, ಮುಂದೆ ತಂಡ ನಾಯಕತ್ವ ವಹಿಸುವ ಭರವಸೆ ಮೂಡಿಸಿದ್ದರು. ಇದೀಗ ನಿವೃತ್ತಿ ಘೋಷಿಸಿ ನಿರಾಸೆ ಮೂಡಿಸಿದ್ದಾರೆ.
ನಸೀಮ್ ಅವರು ಇಸ್ಲಾಂ ಧರ್ಮದ ಪ್ರಕಾರ ತಮ್ಮ ಜೀವನವನ್ನು ನಡೆಸುವ ಕಾರಣದಿಂದ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ನಿವೃತ್ತಿ ಹೇಳಲು ನಿರ್ಧರಿಸಿದ್ದಾರೆ. ನಾನು ಕ್ರಿಕೆಟ್ ಆಟ ತ್ಯಜಿಸುತ್ತಿದ್ದೇನೆ ಮತ್ತು ಇಸ್ಲಾಂ ಧರ್ಮದ ಪ್ರಕಾರ ನನ್ನ ಜೀವನವನ್ನು ನಡೆಸಲು ಬಯಸುತ್ತೇನೆ ಎಂದು ನಸೀಮ್ ಪಾಕಿಸ್ತಾನ ಕ್ರಿಕೆಟ್ ಬೋರ್ಡ್ಗೆ ತಿಳಿಸಿದ್ದಾರೆ.
18 ವರ್ಷದ ಪಾಕ್ ಮಹಿಳಾ ಆಟಗಾರ್ತಿ ಆಯೇಶಾ ನಸೀಮ್ ಈವರೆಗೆ ನಾಲ್ಕು ಏಕದಿನ, 30 T20 ಪಂದ್ಯಗಳನ್ನಾಡಿದ್ದಾರೆ. ಅಗ್ರ ಕ್ರಮಾಂಕದ ಬ್ಯಾಟರ್ ಆಗಿ ಟಿ20 ಕ್ರಿಕೆಟ್ನಲ್ಲಿ 18:45 ಸರಾಸರಿಯಲ್ಲಿ 369 ರನ್ ಗಳಿಸಿದ್ದಾರೆ. ಏಕದಿನ ಕ್ರಿಕೆಟ್ನಲ್ಲಿ ಕೇವಲ 33 ರನ್ ಗಳಿಸಿದ್ದಾರೆ. 2023ರ ಮಹಿಳಾ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭಾರತೀಯ ಮಹಿಳಾ ಕ್ರಿಕೆಟ್ ತಂಡದ ವಿರುದ್ಧ ಕಣಕ್ಕಿಳಿದಾಗ 25 ಎಸೆತಗಳಲ್ಲಿ ಸ್ಫೋಟಕ 43 ರನ್ ಚಚ್ಚಿದ್ದರು.
2021ರಲ್ಲಿ ಆಯೇಶಾ ವೆಸ್ಟ್ ಇಂಡೀಸ್ ವಿರುದ್ಧ ಕಣಕ್ಕಿಳಿದಾಗ 33 ಎಸೆತಗಳಲ್ಲಿ 45 ರನ್ ಗಳಿಸಿದ್ದರು. ಈ ಮೂಲಕ ಎಲ್ಲರ ಗಮನ ಸೆಳೆದಿದ್ದರು. ಅದೇ ವರ್ಷದಲ್ಲಿ ಶ್ರೀಲಂಕಾ ವಿರುದ್ಧ ನಡೆದ ಟಿ20 ಕ್ರಿಕೆಟ್ನಲ್ಲಿ 31 ಎಸೆತಗಳಲ್ಲಿ 45 ರನ್ ಗಳಿಸಿ ಮಿಂಚಿದ್ದರು. ಈ ವರ್ಷದ ಜನವರಿಯಲ್ಲಿ ಆಸ್ಟ್ರೇಲಿಯಾ ವಿರುದ್ಧ ಟಿ20 ಸರಣಿಯಲ್ಲಿ ಭರ್ಜರಿ ಬ್ಯಾಟಿಂಗ್ ಮಾಡಿ ತಂಡದಲ್ಲಿ ಗುರುತಿಸಿಕೊಂಡಿದ್ದರು. ಪಾಕ್ ಹಿರಿಯ ಕ್ರಿಕೆಟಿಗರಿಂದಲೂ ಭಾರೀ ಹೊಳಿಗಕೆ ಸಂದಿತ್ತು.

Loading

Leave a Reply

Your email address will not be published. Required fields are marked *