ಕೇಂದ್ರ ಸರ್ಕಾರ ತೆಂಗು ಬೆಳೆಗಾರರ ವಿರೋಧಿ ನೀತಿ ತೋರಿಸುತ್ತಿದೆ. ಸಿಎಂ ಮಧ್ಯಪ್ರವೇಶ ಮಾಡಬೇಕು ಎಂದು ಕೊಬ್ಬರಿ ಬೆಲೆ ಇಳಿಕೆ ಸಂಬಂಧ ಎಸ್ ರವಿ ಪ್ರಶ್ನೆ ಮಾಡಿದರು. ಇದಕ್ಕೆ ಉತ್ತರಿಸಿದ ಸಚಿವ ಶಿವಾನಂದ ಪಾಟೀಲ್ ತೆಂಗಿನ ಗಿಡ ಕೃಷಿ ಇಲಾಖೆಗೆ ಬರುತ್ತದೆ,
ಕೊಬ್ಬರಿ ನನ್ನ ಇಲಾಖೆಗೆ ಬರುತ್ತದೆ. ಕೊಬ್ಬರಿ ಬೆಲೆ ಕಡಿಮೆ ಆಗುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರಕ್ಕೆ ಪತ್ರ ಬರೆದಿದ್ದೇವೆ. 16 ಸಾವಿರ ಕನಿಷ್ಟ ಬೆಲೆ ನೀಡುವುಕ್ಕೆ ಕೇಳಿದ್ದೇವು. ಆದರೆ ಕೇಂದ್ರ 11 ಸಾವಿರ ಮಾತ್ರ ಕನಿಷ್ಟ ಬೆಂಬಲ ನೀಡಿದ್ದಾರೆ. ಇದಕ್ಕೆ ಕಡಿಮೆಯಾಗುತ್ತದೆ ಅಂತ ನಾವು ರಾಜ್ಯ ಸರ್ಕಾರ 1250 ರೂ. ಸೇರಿಸಿ ಕೊಟ್ಟಿದ್ದೇವೆ ಎಂದರು.