ಬೆಂಗಳೂರು: ರಾಜಭವನಕ್ಕೆ ವಿಧಾನಸಭೆ ಸ್ಪೀಕರ್ ಯು.ಟಿ.ಖಾದರ್ ಭೇಟಿ ನೀಡಿದ್ದಾರೆ. ಸ್ಪೀಕರ್ ಖಾದರ್ ರಾಜ್ಯಪಾಲ ಗೆಹ್ಲೋಟ್ ಭೇಟಿ ಮಾಡಿದ್ದಾರೆ. ನಿನ್ನೆ ಸದನದಲ್ಲಿನ ಬೆಳವಣಿಗೆ, ಹಾಗೂ ಬಿಜೆಪಿ ಶಾಸಕರ ಅಮಾನತು ಸಂಬಂಧ ರಾಜ್ಯಪಾಲರಿಗೆ ಮಾಹಿತಿ ನೀಡಲಿದ್ದಾರೆ.
ಗುರುವಾರ ಬೆಳಗ್ಗೆ ರಾಜಭವನಕ್ಕೆ ತೆರಳಿದ ಸ್ಪೀಕರ್ ರಾಜ್ಯಪಾಲರಿಗೆ ಬುಧವಾರ ಸದನದಲ್ಲಿ ನಡೆದ ಘಟನೆಗಳ ಕುರಿತಾಗಿ ಸಂಪೂರ್ಣ ಮಾಹಿತಿಯನ್ನು ನೀಡಿದ್ದಾರೆ ಎಂದು ತಿಳಿದುಬಂದಿದೆ.
ಈ ಕುರಿತಾಗಿ ಸ್ಪೀಕರ್ ಯು.ಟಿ ಖಾದರ್ ವಿಧಾನಸೌಧದಲ್ಲಿ ಪ್ರತಿಕ್ರಿಯೆ ನೀಡಿ, ಅವರು ಗವರ್ನರ್ ನಾನು ಸ್ಪೀಕರ್. ಸದನದಲ್ಲಿ ಏನೇನು ನಡೆದಿದೆ ಅದರ ಸಂಪೂರ್ಣವಾದ ವಿವರವನ್ನು ನೀಡಿದ್ದೇನೆ ಎಂದರು.