ಬೆಂಗಳೂರು: ಐಎಎಸ್ ಅಧಿಕಾರಿ ಆಕಾಶ್ ಶಂಕರ್ (IAS Officer Akash Shankar) ಕೌಟುಂಬಿಕ ಕಲಹ ಇದೀಗ ಬೀದಿಗೆ ಬಂದಿದೆ. ಈ ಮೂಲಕ ಮದುವೆಯಾಗಿ ಒಂದು ವರ್ಷದಲ್ಲಿಯೇ ದಂಪತಿ ನಡುವೆ ಬಿರುಕು ಬಿದ್ದಂತಾಗಿದೆ. ಟ್ರಾಫಿಕಿಂಗ್ ಆಫ್ ಖಾಕೀಸ್ ಡಾಟರ್ ಹಾಗೂ ಟ್ರಾಫಿಕರ್ ಆಫ್ ಡಾಕ್ಟರ್ ವಂದನಾ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಅಪಪ್ರಚಾರ ಮಾಡುತ್ತಿದ್ದಾರೆ ಅಂತಾ ಆರೋಪಿಸಿ ನಿವೃತ್ತ ಐಪಿಎಸ್ ಅಧಿಕಾರಿ ಮಗಳು ಡಾ. ವಂದನಾ (Dr Vandana) ಅವರು ತಮ್ಮ ಪತಿ ಹಾಗೂ ಹಾಲಿ ಐಎಎಸ್ ಅಧಿಕಾರಿಯಾಗಿರುವ ಆಕಾಶ್ ಶಂಕರ್ ವಿರುದ್ಧ ದೂರು ದಾಖಲಿಸಿದ್ದಾರೆ.
ಪತಿ ಆಕಾಶ್ ಶಂಕರ್ ಅಲ್ಲದೆ ಸಹೋದರ ವಿಕಾಸ್ ಶಂಕರ್, ಪತ್ನಿ ಚೇತನಾ ವಿಕಾಸ್, ಐಸಿರಿ ಶಿವಕುಮಾರ್ ಎಂಬವರ ಮೇಲೆಯೂ ವಂದನಾ ದೂರು ನೀಡಿದ್ದಾರೆ. ಈ ಹಿಂದೆ ಈಸ್ಟ್ ಝೋನ್ ಮಹಿಳಾ ಠಾಣೆಯಲ್ಲಿ ವರದಕ್ಷಿಣೆ ಕಿರುಕುಳ, ಹಲ್ಲೆ ಪ್ರಕರಣ ದಾಖಲು ಮಾಡಿದ್ದರು. ಐಎಎಸ್ ಅಧಿಕಾರಿ ಆಕಾಶ್ ಶಂಕರ್ ಅವರ ತಂದೆ ಶಂಕರ್, ತಾಯಿ ಚಂದ್ರಿಕಾ ಮೇಲೆ ವರದಕ್ಷಿಣೆ ಕಿರುಕುಳ ದೂರು ನೀಡಿದ್ದರು. 50 ಲಕ್ಷ ಖರ್ಚು ಮಾಡಿ ಅರಮನೆ ಮೈದಾನದಲ್ಲಿ ಮದುವೆ ಮಾಡಿಸಿ ವರದಕ್ಷಿಣೆ ಕೊಟ್ಟರೂ ಮತ್ತೆ ಹಣದಾಹ ಇದೆ. ಅಷ್ಟೇ ಅಲ್ಲದೆ ಆಕಾಶ್ ಶಂಕರ್ ಬೇರೆ ಮಹಿಳೆಯ ಜೊತೆ ಸಂಪರ್ಕ ಇಟ್ಟುಕೊಂಡಿದ್ದಾರೆಂದೂ ದೂರಿನಲ್ಲಿ ಆರೋಪಿಸಿದ್ದರು.
ಈಗ ಅದೇ ವರದಕ್ಷಿಣೆ ಕೇಸ್ ಸಂಬಂಧ ಸುಳ್ಳು ಆರೋಪ ಎಂದು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುತ್ತಿದ್ದಾರೆ. ತನ್ನ ತಂದೆ ನಿವೃತ್ತ ಐಪಿಎಸ್ ಅಧಿಕಾರಿ ಟಿ.ಆರ್ ಸುರೇಶ್ ಹಾಗೂ ತನಗೆ ಭಯದ ವಾತಾವರಣ ಸೃಷ್ಟಿ ಮಾಡ್ತಿದ್ದಾರೆ. ಅನಾನಿಮಸ್ ಐಪಿಎಸ್ ಎಂಬ ಹೆಸರಿನಲ್ಲಿ ಸಾಮಾಜಿಕ ಜಾಲತಾಣದಲ್ಲಿ ಟ್ರಾಫಿಕಿಂಗ್ ಆಫ್ ಖಾಕೀಸ್ ಡಾಟರ್ ಎಂದೆಲ್ಲಾ ಮೆಸೇಜ್ ಮಾಡಿ ಕುಟುಂಬದ ಗೌರವಕ್ಕೆ ಧಕ್ಕೆ ತರುತ್ತಿದ್ದಾರೆಂದು ಎಂದು ವಂದನಾ ದೂರಿನಲ್ಲಿ ತಿಳಿಸಿದ್ದಾರೆ. ಸದ್ಯ ಈ ಸಂಬಂಧ ಕೊಡಿಗೇಹಳ್ಳಿ ಪೊಲೀಸ್ ಠಾಣೆಯಲ್ಲಿ ಐಪಿಎಸ್ ಅಧಿಕಾರಿ ಆಕಾಶ್ ಶಂಕರ್ ವಿರುದ್ಧ ಎಫ್ಐಆರ್ ದಾಖಲಾಗಿದೆ.