ಚಿನ್ನ ಖರೀದಿಯಲ್ಲಿ ಭಾರತೀಯರು ಸದಾ ಮುಂದು. ಆದರೆ, ಪ್ರಸಕ್ತ ವರ್ಷದ ಮೊದಲ ತ್ರೈಮಾಸಿಕದಲ್ಲಿ (ಜನವರಿ- ಮಾರ್ಚ್) ಭಾರತೀಯ ಗ್ರಾಹಕರಲ್ಲಿ ಖರೀದಿ ಉತ್ಸಾಹ ಗಣನೀಯವಾಗಿ ತಗ್ಗಿದೆ. ಈ ಪರಿಣಾಮ, ತ್ರೈಮಾಸಿಕದಲ್ಲಿ ಭಾರತದ ಚಿನ್ನದ ಬೇಡಿಕೆ ಶೇ 17ರಷ್ಟು ಕುಸಿದಿದೆ. ಆದರೆ, ಚೀನಾದಲ್ಲಿ ಬೇಡಿಕೆ ಶೇ 41ರಷ್ಟು ಏರಿಕೆಯಾಗಿದೆ.
“ಚಿನ್ನದ ದರ ಗಗನಕ್ಕೇರಿದ್ದು, ಭಾರತದಲ್ಲಿ ಬೇಡಿಕೆ ಕುಸಿದಿದೆ. ಮೊದಲ ತ್ರೈಮಾಸಿಕದಲ್ಲಿ 78 ಟನ್ಗಳಿಗೆ ಬೇಡಿಕೆ ಕಂಡು ಬಂದಿದ್ದು, ಇದು 2020ರಿಂದ ಈಚೆಗಿನ ಕನಿಷ್ಠ ಮಟ್ಟವಾಗಿದೆ. 2022ರ ಮೊದಲ ತ್ರೈಮಾಸಿಕದಲ್ಲಿ 94.2 ಟನ್ ಚಿನ್ನ ಮಾರಾಟವಾಗಿತ್ತು,” ಎಂದು ವರ್ಲ್ಡ್ ಗೋಲ್ಡ್ ಕೌನ್ಸಿಲ್ (ಡಬ್ಲ್ಯುಜಿಸಿ) ತನ್ನ ವರದಿಯಲ್ಲಿ ಹೇಳಿದೆ.
ಏತನ್ಮಧ್ಯೆ, ಇದೇ ಅವಧಿಯಲ್ಲಿ ಚೀನಾದಲ್ಲಿ ಚಿನ್ನದ ಬೇಡಿಕೆಯು ಶೇ 41ರಷ್ಟು ವೃದ್ಧಿಯಾಗಿದ್ದು 198 ಟನ್ ಚಿನ್ನವನ್ನು ಅಲ್ಲಿಯ ಗ್ರಾಹಕರು ಖರೀದಿಸಿದ್ದಾರೆ. ಚೀನಾದಲ್ಲಿ 2015ರಿಂದ ಈಚೆಗಿನ ಗರಿಷ್ಠ ಮಟ್ಟದ ಬೇಡಿಕೆ ಇದಾಗಿದೆ.
ಕೋವಿಡ್ ನಿರ್ಬಂಧಗಳು ತೆರವಾಗಿದ್ದು, ಮದುವೆ ಮತ್ತು ಇತರ ಕಾರ್ಯಕ್ರಮಗಳಿಗೆ ಅವಕಾಶ ಸಿಕ್ಕಿದೆ. ದೇಶೀಯ ಮಾರುಕಟ್ಟೆ ಚೇತರಿಸಿಕೊಳ್ಳುತ್ತಿದೆ. ಚೀನಾ ಜಿಡಿಪಿ ಶೇ 4.5ಕ್ಕೆ ಏರಿಕೆಯಾಗಿದೆ. ಹೂಡಿಕೆ ಸಲುವಾಗಿಯೂ ಚೀನಾ ನಾಗರಿಕರು ಚಿನ್ನದತ್ತ ಆಕರ್ಷಿತರಾಗಿದ್ದಾರೆ.
ಪ್ರಮುಖ ನಗರಗಳಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ
• ಚೆನ್ನೈ – 50,730 ರೂ.
• ಮುಂಬೈ- 49,600 ರೂ.
• ದೆಹಲಿ- 49,750 ರೂ.
• ಕೊಲ್ಕತ್ತಾ- 49,600 ರೂ.
• ಬೆಂಗಳೂರು- 49,650 ರೂ.
• ಹೈದರಾಬಾದ್- 49,600 ರೂ.
• ಕೇರಳ- 49,600 ರೂ.
• ಪುಣೆ- 49,600 ರೂ.
• ಮಂಗಳೂರು- 49,650 ರೂ.
• ಮೈಸೂರು- 49,650 ರೂ.
ಪ್ರಮುಖ ನಗರಗಳಲ್ಲಿ 24 ಕ್ಯಾರೆಟ್ ಚಿನ್ನದ ಬೆಲೆ
• ಚೆನ್ನೈ- 55,190 ರೂ.
• ಮುಂಬೈ- 54,110 ರೂ.
• ದೆಹಲಿ- 54,260 ರೂ.
• ಕೊಲ್ಕತ್ತಾ- 54,110 ರೂ.
• ಬೆಂಗಳೂರು- 54,160 ರೂ.
• ಹೈದರಾಬಾದ್- 54,110 ರೂ.
• ಕೇರಳ- 54,110 ರೂ.
• ಪುಣೆ- 54,110 ರೂ.
• ಮಂಗಳೂರು- 54,160 ರೂ.
• ಮೈಸೂರು- 54,160 ರೂ.
ಮಂಗಳವಾರದ ಬೆಳ್ಳಿ ದರ (ಪ್ರತಿ 1 ಕೆಜಿಗೆ)
ಬೆಂಗಳೂರು- 73,100 ರೂ.
ಮೈಸೂರು- 73,100 ರೂ.
ಮಂಗಳೂರು- 73,100 ರೂ.
ಮುಂಬೈ- 69,500 ರೂ.
ಚೆನ್ನೈ- 73,100 ರೂ.
ದೆಹಲಿ- 69,500 ರೂ.
ಹೈದರಾಬಾದ್- 73,100 ರೂ.
ಕೊಲ್ಕತ – 69,500 ರೂ.