ವಾರ್ಸಾ: ಪೋಲಿಷ್ ನಗರದ ಪೊಜ್ನಾನ್ನಲ್ಲಿರುವ ಡೌನ್ಟೌನ್ ರೆಸ್ಟೋರೆಂಟ್ನಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರವಾಸಿಗರಲ್ಲಿ ಜನಪ್ರಿಯವಾಗಿರುವ ಪೋಜ್ನಾನ್ ಓಲ್ಡ್ ಟೌನ್ನಲ್ಲಿರುವ ಸೇಂಟ್ ಮಾರ್ಟಿನ್ ಸ್ಟ್ರೀಟ್ನಲ್ಲಿರುವ ಹೋಟೆಲ್ ರೆಸ್ಟೋರೆಂಟ್ ಗಾರ್ಡನ್ನಲ್ಲಿ ಈ ಘಟನೆಯು ನಡೆದಿದೆ ಎಂದು ಪೋಜ್ನಾನ್ ಪೋಲಿಸ್ ವಕ್ತಾರ ಆಂಡ್ರೆಜ್ ಬೊರೊವಿಯಾಕ್ ಹೇಳಿದರು.
ಘಟನೆಯಲ್ಲಿ ಓರ್ವ ಸ್ಥಳದಲ್ಲೇ ಮೃತಪಟ್ಟರೆ, ಮತ್ತೋರ್ವ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಮೃತರು ಸ್ಥಳೀಯ ನಿವಾಸಿಗಳಾಗಿದ್ದು ಓರ್ವ ವ್ಯಕ್ತಿ ಮತ್ತೊಬ್ಬನಿಗೆ ಗುಂಡು ಹೊಡೆದು ನಂತರ ಸ್ವತಃ ಗುಂಡು ಹಾರಿಸಿಕೊಂಡಿದ್ದಾನೆ ಎಂದು ಸ್ಥಳದಲ್ಲಿದ್ದವರು ತಿಳಿಸಿದ್ದಾರೆ ಎಂದು ಗೆಜೆಟಾ ವೈಬೋರ್ಜಾ ಪತ್ರಿಕೆ ವರದಿ ಮಾಡಿದೆ.