ಶಶಾಂಕ್ ನಿರ್ದೇಶನದ ಸಿನಿಮಾವೊಂದರ ಕಾರ್ಯಕ್ರಮದಲ್ಲಿ ನಟ ಕಿಚ್ಚ ಸುದೀಪ್ ಭಾಗಿಯಾಗಿದ್ದರು. ಈ ವೇಳೆ ವೇದಿಕೆಯ ಮೇಲಿದ್ದ ಕೆಲ ಕಲಾವಿದರು ಸುದೀಪ್ ಅವರನ್ನು ಹಿರಿಯನಟ ಎಂದು ಕರೆಯುತ್ತಿದ್ದರು. ಅದನ್ನು ಗಮನಿಸಿದ ಕಿಚ್ಚ, ಸಹನಟರಿಗೆ ತಮಾಷೆಯಾಗಿ ನಾನು ಹಿರಿಯ ನಟ ಅಲ್ಲ, ಹಾಗೆ ಕರೆಯಬೇಡಿ ಎಂದು ಹೇಳಿದ್ದಾರೆ.
ಆರಂಭದಿಂದಲೂ ಕಿಚ್ಚ ಸುದೀಪ್ ಸಾಕಷ್ಟು ಸಿನಿಮಾಗಳಿಗೆ ಸಾಥ್ ನೀಡುತ್ತಾ ಬಂದಿದ್ದಾರೆ. ಅದರಂತೆ ಇಂದು ಕೂಡ ಶಶಾಂಕ್ ನಿರ್ದೇಶನದ ಸಿನಿಮಾಗೆ ವಿಶೇಷ ಅತಿಥಿಯಾಗಿ ಆಗಮಿಸುವ ಮೂಲಕ ಚಿತ್ರತಂಡಕ್ಕೆ ಸಾಥ್ ನೀಡಿದ್ದಾರೆ.
ಒಂದು ಕಡೆ ಸಿನಿಮಾ ಸಂಬಂಧಿ ನಾನಾ ಕಾರ್ಯಕ್ರಮಗಳಲ್ಲಿ ಸುದೀಪ್ ಬ್ಯುಸಿಯಾಗಿದ್ದರೆ ಮತ್ತೊಂದು ಕಡೆ ಅವರದ್ದೇ ಹೊಸ ಸಿನಿಮಾದ ಕೆಲಸಗಳಲ್ಲೂ ಅವರು ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಸುದೀಪ್ ನಟನೆಯ 46ನೇ ಸಿನಿಮಾಗೆ ತಮಿಳಿನ ಯುವ ನಿರ್ದೇಶಕ ವಿಜಯ್ ಕಾರ್ತಿಕೇಯ ಆಯಕ್ಷನ್ ಕಟ್ ಹೇಳುತಿದ್ದಾರೆ.ಚಿತ್ರಕ್ಕೆ ಸದ್ಯ Kiccha 46 ಎಂದು ಹೆಸರಿಡಲಾಗಿದ್ದು, ಸಿನಿಮಾ ಟೀಸರ್ ಸೋಷಿಯಲ್ ಮೀಡಿಯಾದಲ್ಲಿ ಸೆನ್ಸೇಷನ್ ಕ್ರಿಯೇಟ್ ಮಾಡ್ತಿದೆ.