ಇತ್ತೀಚೆಗೆ ಅಮೆರಿಕಾದ ಶ್ವೇತಭವನದಲ್ಲಿ ವಾಡಿಕೆಯ ಭದ್ರತಾ ತಪಾಸಣೆಯಲ್ಲಿ ಸ್ವಲ್ಪ ಪ್ರಮಾಣದ ಕೊಕೇನ್ ಪತ್ತೆಯಾಗಿತ್ತು.ಇದರ ಬೆನ್ನಲ್ಲೇ ಡೊನಾಲ್ಡ್ ಟ್ರಂಪ್ ಅವರು ಕೊಕೇನ್ ಕೊಟ್ಟು ಅಮೆರಿಕ ಅಧ್ಯಕ್ಷ ಜೋ ಬೈಡನ್ ಅವರಿಂದ ಭಾಷಣ ಮಾಡಿಸುತ್ತಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ.
ಅಧ್ಯಕ್ಷರು ಅಥವಾ ಅವರ ಕೊಕೇನ್ ವ್ಯಸನದಿಂದ ಚೇತರಿಸಿಕೊಳ್ಳುತ್ತಿರುವ ಅವರ ಮಗ ಹಂಟರ್ ಬೈಡನ್ಗಾಗಿರುವ ಕೊಕೇನ್ ಅದು. ಜೋ ಬೈಡನ್ ಕೊಕೇನ್ ಅಮಲಿನಲ್ಲಿರುವ ಅಧ್ಯಕ್ಷ ಎಂದು ಟ್ರಂಪ್ ಹೇಳಿದ್ದಾರೆ.ಶ್ವೇತಭವನದಲ್ಲಿ ಪತ್ತೆಯಾದ ಕೊಕೇನ್ ಭಾರೀ ಪ್ರಮಾಣದ ಒಂದು ಪುಟ್ಟ ಭಾಗ ಅಷ್ಟೇ. ಯುಎಸ್ ಅಧ್ಯಕ್ಷರ ಭಾಷಣಗಳನ್ನು ನೋಡಿದರೆ ಅವರು ಮಾದಕ ವಸ್ತುಗಳ ಪ್ರಭಾವದಲ್ಲಿದ್ದಾರೆ ಎಂದು ಕಾಣುತ್ತದೆ ಎಂದು ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
“ನಿಮಗೆ ಗೊತ್ತಾ, ನೀವು ಜೋ ಅವರನ್ನು ಅವರ ಭಾಷಣದ ಆರಂಭದಲ್ಲಿ ನೋಡುತ್ತೀರಿ. ಈಗ ಅವರು ಸ್ವಲ್ಪ ಪುಟಿದೆದ್ದಿದ್ದಾರೆ. ಸ್ವಲ್ಪ ಅಷ್ಟೇ ಅಲ್ಲ, ಸ್ವಲ್ಪ ಹೆಚ್ಚೇ ಪುಟಿದೆದ್ದಿದ್ದಾರೆ. ಭಾಷಣ ಮುಗಿವ ಹೊತ್ತಿಗೆ ಅದು ಏನೋ ಆಗಿಬಿಡುತ್ತದೆ. ಅವರಿಗೆ ವೇದಿಕೆಯಿಂದ ಹೊರಗೆ ಹೋಗುವ ದಾರಿಯೂ ಕಾಣುತ್ತಿಲ್ಲ. ಆದ್ದರಿಂದ ಅಲ್ಲಿ ಏನೋ ನಡೆಯುತ್ತಿದೆ ಎಂದು ಟ್ರಂಪ್ ಹೇಳಿದ್ದಾರೆ.
ಜೋ ಬೈಡನ್ ಮತ್ತು ಹಂಟರ್ ಬೈಡನ್ಗಾಗಿ ಕೊಕೇನ್ ಅನ್ನು ಶ್ವೇತಭವನದಲ್ಲಿ ಇಟ್ಟುಕೊಂಡಿದ್ದು ಎಂದು ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಇದು ಕೇವಲ ನನ್ನ ಅಭಿಪ್ರಾಯ. ಅವರಿಗೆ ಕೊಕೇನ್ ನೀಡಿ ಉಬ್ಬಿಸಲಾಗುತ್ತದೆ ಎಂದು ನಾನು ಭಾವಿಸುತ್ತೇನೆ. ನೀವು ಪರಮಾಣು ಶಸ್ತ್ರಾಸ್ತ್ರಗಳು ಮತ್ತು ಎಲ್ಲದರೊಂದಿಗೆ ವ್ಯವಹರಿಸುವಾಗ ನಾವು ಕೊಕೇನ್ ಸೇವಿಸುವ ಅಧ್ಯಕ್ಷರನ್ನು ಹೊಂದಲು ಸಾಧ್ಯವಿಲ್ಲ. ಇದು ತುಂಬಾ ಅಪಾಯಕಾರಿ ಎಂದು ಟ್ರಂಪ್ ಹೇಳಿದ್ದಾರೆ.