ಸ್ಪೆಷನ್ ಟೊಮೆಟೋ ಫೋರ್ಸ್ ಎಂದು ಕರೆಯುವಂತೆ ಸಲಹೆ ನೀಡಿದ ಅಖಿಲೇಶ್ ಯಾದವ್

ದೆಹಲಿ: ಮಾರುಕಟ್ಟೆಯಲ್ಲಿ ಬೆಲೆ ಇಳಿಕೆ ಕಂಡಾಗ ರಸ್ತೆಯಲ್ಲಿ ಚೆಲ್ಲಾಪಿಲ್ಲಿಯಾಗಿ ಬೀಳುತ್ತಿದ್ದ ಕೆಂಪು ಸುಂದರಿ ಟೊಮೆಟೋಗೆ ಇದೀಗ ಭರ್ಜರಿ ಬೇಡಿಕೆ ಇದೆ. ದೇಶಾದ್ಯಂತ ಟೊಮೆಟೋ (Tomato) ಬೆಲೆ ಗಗನಕ್ಕೇರಿದ್ದು, ಇದೀಗ ಗನ್ ಮ್ಯಾನ್‍ಗಳನ್ನಿಟ್ಟುಕೊಂಡು ಮಾರಾಟ ಮಡುವ ಪರಿಸ್ಥಿತಿ ಬಂದಿದೆ.

ಈ ಹಿನ್ನೆಲೆಯಲ್ಲಿ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಅವರು ಎಸ್‍ಟಿಎಫ್ ಗೆ ಹೊಸ ನಾಮಕರಣವೊಂದನ್ನು ಮಾಡುವಂತೆ ಸಲಹೆ ನೀಡಿದ್ದಾರೆ.
ಟೊಮೆಟೋ ಬಂಗಾರ ಬೆಲೆ ಪಡೆಯುತ್ತಿದ್ದಂತೆಯೇ ಕಳ್ಳತನದ ಸುದ್ದಿಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಹೀಗಾಗಿ ಸ್ಪೆಷಲ್ ಟಾಸ್ಕ್ ಫೋರ್ಸ್ (STF) ಅನ್ನು ಸ್ಪೆಷನ್ ಟೊಮೆಟೋ ಫೋರ್ಸ್ ಎಂದು ಕರೆಯುವಂತೆ ಸಲಹೆ ನೀಡಿದ್ದಾರೆ. ಈ ಮೂಲಕ ರಾಜ್ಯ ಪೊಲೀಸರನ್ನು ಅಖಿಲೇಶ್ (Akhilesh Yadav) ಕಿಚಾಯಿಸಿದ್ದಾರೆ.

ಜುಲೈ 10 ಸೋಮವಾರದಂದು ಅಂಗಡಿ ಮಾಲೀಕರಾದ ರಾಮ್‍ಜಿ ಹಾಗೂ ನೈಮ್ ಖಾನ್ ಎಂದಿನಂತೆ ವ್ಯಾಪಾರ ಮುಗಿಸಿ ರಾತ್ರಿ ಅಂಗಡಿಗೆ ಬೀಗ ಹಾಕಿ ಮನೆಗೆ ತೆರಳಿದರು. ಬಳಿಕ ಮರುದಿನ ಬೆಳಗ್ಗೆ ಬಂದು ಅಂಗಡಿ ಓಪನ್ ಮಾಡಿದಾಗ ಟೊಮೆಟೋ, ಹಸಿಮೆಣಸಿನ ಕಾಯಿ ಹಾಗೂ ಶುಂಠಿ ಕಳ್ಳತನವಾಗಿರುವುದು ಬಯಲಾಗಿದೆ ಎಂದು ಪೊಲೀಸರು ವಿವರಿಸಿದ್ದಾರೆ.

ಕಳ್ಳತನ ಗೊತ್ತಾದ ತಕ್ಷಣವೇ ಇಬ್ಬರೂ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಕೂಡಲೇ ಎಚ್ಚೆತ್ತ ಪೊಲೀಸರು ಘಟನೆಯನ್ನು ಗಂಭೀರವಾಗಿ ಪರಗಣಿಸಿ ಕಾಂತ ಪ್ರಸಾದ್ ಹಾಗೂ ಮೊಹಮ್ಮದ್ ಇಸ್ಲಾಮ್ ಅನ್ನು ಬಂಧಿಸಿ, ಐಪಿಸಿ ಸೆಕ್ಷನ್ 379ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Loading

Leave a Reply

Your email address will not be published. Required fields are marked *