ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸಾಕಷ್ಟು ಭಾರಿ ತಾವು ಕಾಮನ್ ಮ್ಯಾನ್ ಅನ್ನುವುದನ್ನು ತೋರಿಸಿಕೊಟ್ಟಿದ್ದಾರೆ. ಅದರಂತೆ ಇದೀಗ ರಾಹುಲ್ ಹಿಮಾಚಲ ಪ್ರದೇಶಕ್ಕೆ ಹೋಗುತ್ತಿದ್ದ ವೇಳೆ ಮಾರ್ಗ ಮಧ್ಯೆ ಸೋನಿಪತ್ ಜಿಲ್ಲೆಯ ಮದೀನಾ ಗ್ರಾಮದಲ್ಲಿ ಗಾಡಿ ನಿಲ್ಲಿಸಿ ಗದ್ದೆಯಲ್ಲಿ ಭತ್ತ ನಾಟಿ ಮಾಡುತ್ತಿದ್ದ ರೈತರ ಜೊತೆ ಸೇರಿ ತಾವು ಕೂಡ ಭತ್ತ ನಾಟಿ ಮಾಡಲು ಸಹಾಯ ಮಾಡಿದರು.
ಗದ್ದೆಯಲ್ಲಿ ಟ್ರ್ಯಾಕ್ಟರ್ ಮೂಲಕ ಹೊಲವನ್ನು ಉಳುಮೆ ಮಾಡಿ ರೈತರಿಗೆ ಹುರಿದುಂಬಿಸಿದ ರಾಹುಲ್ ಗಾಂಧಿ, ಕೆಲ ಗಂಟೆಗಳ ಕಾಲ ರೈತರ ಜೊತೆ ಸಮಯ ಕಳೆದು ಕೃಷಿಯ ಬಗ್ಗೆ ಮಾಹಿತಿಯನ್ನು ಪಡೆದುಕೊಂಡರು.
ರಾಹುಲ್ ಗಾಂಧಿ ಕೃಷಿಕ ಮಹಿಳೆಯರ ಜೊತೆಗೆ ಭತ್ತದ ಸಸಿಯನ್ನು ನಾಟಿ ಮಾಡುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಕಾಂಗ್ರೆಸ್ ತನ್ನ ಟ್ವಿಟ್ಟರ್ ಖಾತೆಯಲ್ಲಿ ಫೋಟೋ ಶೇರ್ ಮಾಡಿದೆ. ಅಲ್ಲದೇ, ರಾಹುಲ್ ಅವರು ಅನಿರೀಕ್ಷಿತವಾಗಿ ಭತ್ತ ನಾಟಿ ಕಾರ್ಯದಲ್ಲಿ ತೊಡಗಿಸಿ ರೈತರೊಂದಿಗೆ ಸಂವಾದ ನಡೆಸಿದರು ಎಂದು ಜಗ್ಬೀರ್ ಸಿಂಗ್ ಮಲಿಕ್ ಹೇಳಿದ್ದಾರೆ.