ಮಳೆಗಾಲ ಸಮಯದಲ್ಲಿ ಮಕ್ಕಳು ಬಹು ಬೇಗ ಅನಾರೋಗ್ಯಕ್ಕೆ ಗುರಿಯಾಗುತ್ತಾರೆ. ನೀರಿನ ಕೊಚ್ಚೆ, ಗುಂಡಿಗಳ ಸಮೀಪದಲ್ಲಿಆಟವಾಡುವುದು ಸೂಕ್ಷ್ಮಜೀವಿಗಳನ್ನು ಮನೆಗೆ ಕರೆದಂತೆ. ಪೋಷಕರಾಗಿ ನೀವು ಮಕ್ಕಳ ಬಗ್ಗೆ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಬೇಕು. ಅಷ್ಟಕ್ಕೂ ಮಳೆಗಾಲದಲ್ಲಿ ಹೆಚ್ಚಾಗಿ ಕಂಡು ಬರುವ ಸಾಮಾನ್ಯ ಕಾಯಿಲೆಗಳ ಬಗ್ಗೆ ಮಾಹಿತಿ ಇಲ್ಲಿದೆ ನೋಡಿ…
ಡೆಂಗ್ಯೂ
ಮಲೇರಿಯಾ ಮಾತ್ರ ಸೊಳ್ಳೆಗಳನ್ನು ಉಂಟು ಮಾಡುವ ಕಾಯಿಲೆಯಲ್ಲ. ಡೆಂಗ್ಯೂ ಸೊಳ್ಳೆಯು ಕಚ್ಚಿದಾಗ ಕೀಲುಗಳಲ್ಲಿ ಹಾಗು ಸ್ನಾಯುಗಳಲ್ಲಿ ನೋವು, ತಲೆನೋವು, ತೀವ್ರವಾದ ಜ್ವರ, ವಾರಕ್ಕೆ 2 ರಿಂದ 3 ಬಾರಿ ಜ್ವರ ಬರುವುದು, ಹೆಮರಾಜಿಕ್ ರಕ್ತಸ್ರಾವ ಹೀಗೆ ಮಾರಣಾಂತಿಕ ಕಾಯಿಲೆಗಳನ್ನು ಸೃಷ್ಟಿಸಬಹುದು.
ವೈರಲ್ ಜ್ವರ
ಇದು ವರ್ಷದ ಯಾವುದೇ ಸಮಯದಲ್ಲಿ ಸೋಂಕಿಗೆ ಒಳಗಾಗಬಹುದಾದರೂ, ಮಳೆಗಾಲದಲ್ಲಿ ವೈರಲ್ ಆಗುವ ಸಾಧ್ಯತೆಗಳು ಹೆಚ್ಚು. ತೀವ್ರವಾದ ಜ್ವರ, ದೌರ್ಬಲ್ಯ, ಮೂಗು ಕಟ್ಟುವುದು, ಗಂಟಲಿನ ನೋವು ಇದರ ರೋಗಲಕ್ಷಣಗಳಾಗಿವೆ.
ಮಲೇರಿಯಾ
ಮಳೆಗಾಲ ಸಮಯದಲ್ಲಿ ಅದರಲ್ಲೂ ಮಕ್ಕಳಲ್ಲಿ ಈ ಮಲೇರಿಯಾ ಹೆಚ್ಚಾಗಿ ಕಂಡು ಬರುತ್ತದೆ. ಕೊಚ್ಚೆಯ ನೀರು ಸೊಳ್ಳೆಗಳಿಗೆ ಪರಿಣಾಮಕಾರಿ ಸಂತಾನೋತ್ಪತ್ತಿಯ ಮೈದಾನವಾಗಿರುತ್ತದೆ. ಸೊಳ್ಳೆಗಳು ಕಚ್ಚಿದ ಮಗುವು ಜ್ವರದ ಮೂಲಕ ಮಲೇರಿಯಾದ ರೋಗಲಕ್ಷಣಗಳನ್ನು ಪಡೆಯುತ್ತದೆ.
ಕಾಲರಾ
ಕಾಲರಾ ಅಶುಚಿಯಾದ ಆಹಾರದ ಮೂಲಕ ಬರುತ್ತದೆ. ಇದು ನಿರ್ದಿಷ್ಟ ರೀತಿಯ ಬ್ಯಾಕ್ಟೀರಿಯಾದಿಂದ ಉಂಟಾಗುತ್ತದೆ. ಬ್ಯಾಕ್ಟೀರಿಯಾಗಳು ಕೊಳಕು ಹಾಗು ಕಲುಷಿತ ನೀರಿನಲ್ಲಿ ಬೆಳೆದು ತನ್ನ ಹರಡುವಿಕೆಯನ್ನು ಪ್ರಾರಂಭಿಸುತ್ತದೆ.