ಚಿಕ್ಕಬಳ್ಳಾಪುರ: ಬೆಳಗಾವಿ ಜಿಲ್ಲೆ ಚಿಕ್ಕೋಡಿಯ ಜೈನ ಮುನಿ ಆಚಾರ್ಯ ಶ್ರೀ 108 ಕಾಮಕುಮಾರ ನಂದಿ ಮಹಾರಾಜರ ಭೀಕರ ಹತ್ಯೆಯನ್ನು ಖಂಡಿಸಿ ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲ್ಲೂಕು ದಿಗಂಬರ ಜೈನ ಸಮಾಜದ ವತಿಯಿಂದ ಗೌರಿಬಿದನೂರು ನಗರದ ಗಾಂಧಿವೃತ್ತದಲ್ಲಿ ಪ್ರತಿ ಭಟನೆ ನಡೆಸಲಾಯಿತು.
ಅಧ್ಯಕ್ಷರಾದ ದೇವಕುಮಾರ್ ಜೈನ ಧರ್ಮವು ಬದುಕು ಬದುಕಲು ಬಿಡು ಎಂಬ ತತ್ವದ ಮೂಲಕ ಜಗತ್ತಿಗೆ ಆಹಿಂಸೆ ಮತ್ತು ಶಾಂತಿ ಮೋದಿಸುವ ಧರ್ಮ ಪ್ರಾಣಿ ಪಕ್ಷಿಗಳಾದಿಯಾಗಿ ದೇವರಾಶಿಗಳಿಗೆ ತೋರಿದರೆ ಬಯಸದೆ ಆದರ್ಶ ಸಮಾಜವಾಗಿರುತ್ತದೆ. ಜೈನ ಮುನಿಗಳು ಸರ್ವ ತ್ಯಾಗ ಮಾಡಿ ಮುನಿಗಳಾಗಿದ್ದರು ಅವರನ್ನು ಬರ್ಭರವಾಗಿ ಕೊಲೆಮಾಡಲಾಗಿದೆ ಇದು ಖಂಡನೀಯ ಈ ಪ್ರಕರಣವನ್ನು ಸಿಬಿಐ ಗೆ ವಹಿಸಬೇಕು ಎಂದರು.
ನಂದಿ ಮಹಾರಾಜರು -ಯರು,ದೇಶದ ಒಳಿತು,ಸಂಸ್ಕಾರ ಸನಾತನ ಧರ್ಮದ ವಿಚಾರವಾಗಿ ಮಾರ್ಗದರ್ಶನ ನೀಡಿದವರು. ಹಾವ್ರತದಂತೆ ಪಾಲಿಸುವ ಜೈನ ಮುನಿಗಳ ಸಮಾಜದಲ್ಲಿ ಶ್ರೇಷ್ಠ ಸ್ಥಾನವಿದೆ, ನಂದಿ ಮುನಿ ಮಹಾರಾಜರ ಭೀಕರ ಹತ್ಯೆ ನಾಗರಿಕ ಸಮಾಜದ ತಲೆ ತಗ್ಗಿಸುವ ಹೀನಾಯ ಕೃತ್ಯವಾಗಿರುತ್ತದೆ ತಹ ಹತ್ಯೆ ಮಾಡಿದ ದುಷ್ಕಕರ್ಮಿಗಳಿಗೆ ಕಠಿಣ ಶಿಕ್ಷೆಯಾಗುವ ನಿಟ್ಟಿನಲ್ಲಿ, ಈ ಪ್ರಕರಣವನ್ನು ಸರ್ಕಾರ ಕಡೆಗಣಿಸುತ್ತಿದೆ ಈ ಕೂಡಲೇ ಸೂಕ್ತ ತನಿಖೆ ನಡೆಸಬೇಕೆಂದು ಹಿರಿಯ ಮುಖಂಡ ಎಂ.ಎಸ್.ದೇವರಾಜ್ ಆಗ್ರಹಿಸಿದರು. ರಾಜ್ಯದಲ್ಲಿನ ಎಲ್ಲಾ ಜೈನ ಮುನಿಗಳಿಗೆ ಸೂಕ್ತ ರಕ್ಷಣೆ ಒದಗಿಸಬೇಕು ಎಂದು ಆಗ್ರಹಿಸಿದರು.