ಬೆಳ್ಳಂಬೆಳಗ್ಗೆ ಸುಲಿಗೆಗೆ ಇಳಿಯುತ್ತಿದ್ದ ಮಂಗಳಮುಖಿಯರ ಗ್ಯಾಂಗ್ ಅರೆಸ್ಟ್

ಬೆಂಗಳೂರು: ನಗರದಲ್ಲಿ ಬೆಳ್ಳಂಬೆಳಗ್ಗೆ ಸುಲಿಗೆಗೆ ಇಳಿಯುತ್ತಿದ್ದ ಮಂಗಳಮುಖಿಯರನ್ನ ಕೊಡಿಗೆಹಳ್ಳಿ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಇವರ ಸುಲಿಗೆ ನೋಡಿದ್ರೆ ಜನರೇ ಶಾಕ್ ಆಗ್ಬೇಕು ಹೇಗೆ ಮಾಡ್ತಿದ್ರು ಅಂತೀರಾ ಹೇಳ್ತೀವಿ ಕೇಳಿ.
ಬೆಳ್ಳಂಬೆಳಗ್ಗೆ 5 ಗಂಟೆಗೆ ಆಟೋ ಹತ್ತಿದ್ರೆ ಸಾಕು ಸಿಟಿ ತುಂಬಾ ರೌಂಡ್ಸ್ ಹಾಕಿಕೊಂಡು ಎಲ್ಲಂದರಲ್ಲಿ ಜನಗಳ ಹತ್ತಿರ ವಸೂಲಿ ಮಾಡುತ್ತಿದ್ದರು. ಸಿಗ್ನಲ್ ಗಳಲ್ಲಿ ನಿಲ್ಲೋಲ್ಲ, ಬಸ್ ಸ್ಟಾಪ್, ರಸ್ತೆ ಬದಿ ನಡೆಯೋರನ್ನ ಬಿಡ್ತಿರಲಿಲ್ಲ ದುಡ್ಡು ಕೊಡಿ ಕೊಡಿ ಎಂದು ಜನಗಳನ್ನ ಪೀಡಿಸುತ್ತಾ ಅವರು ಕೊಡುವ ತನಕ ಹಿಂಸೆ ಮಾಡುತ್ತಾ ಹಾಗೆ ಅವರ ಬಳಿ ಇದ್ದ ಚಿನ್ನ ಒಡವೆಗಳನ್ನು ಸಹ ವಸೂಲಿ ಮಾಡಿಕೊಂಡು ಬೇರೆ ಕಡೆ ಸಾಗುತ್ತಿದ್ದರು.
ಇತ್ತೀಚೆಗೆ ಕೊಡಿಗೆಹಳ್ಳಿ ಠಾಣ಻ ವ್ಯಾಪ್ತಿಯಲ್ಲಿ ಇವರ ಸುಲಿಗೆ ಹೆಚ್ಚಾಗಿದ್ದು ಜನರು ಬೇಸತ್ತು ಹೋಗಿದ್ದು ಈ ಹಿನ್ನೆಲೆಯಲ್ಲಿ ಠಾಣೆಗೆ ದೂರು ನೀಡಿದ್ದ ಜನ ಇದನ್ನ ಪರೀಕ್ಷಿಸಲು ಪೊಲೀಸರ ಗ್ಯಾಂಗೊಂದು ಮಫ್ತಿಯಲ್ಲಿ ತೊಡಗಿದ್ದರು ಈ ವೇಳೆ ಇಂದು ಬೆಳಗ್ಗೆ ಅವರ ವರ್ತನೆಯನ್ನು ಕಂಡು ರೆಡ್ ಹ್ಯಾಂಡ್ ಆಗಿ ಅರೆಸ್ಟ್ ಮಾಡಿದ್ದಾರೆ.
ಮೂವರು ಮಂಗಳಮುಖಿಯರು ಒಬ್ಬ ಆಟೋ ಡ್ರೈವರ್ ಸಹಾಯದಿಂದ ಈ ಕೃತ್ಯಗಳನ್ನ ಮಾಡುತ್ತಿದ್ದರು. ಇಂದು ಪೊಲೀಸರೇ ಫೀಲ್ಡಿಗಳಿದು ರೆಡ್ ಹ್ಯಾಂಡ್ ಆಗಿ ಓರ್ವ ಆಟೋ ಡ್ರೈವರ್ ,ಮೂವರು ಮಂಗಳಮುಖಿಯರು ಸೇರಿ ನಾಲ್ವರನ್ನ ಸೆರೆಹಿಡಿದಿದ್ದಾರೆ.

Loading

Leave a Reply

Your email address will not be published. Required fields are marked *