ಚಾಕೊಲೇಟ್ ತಿನ್ನೋದ್ರಿಂದಾನೂ ಆರೋಗ್ಯಕ್ಕೆ ಅದೆಷ್ಟು ಪ್ರಯೋಜನವಿದೆ ಗೊತ್ತಾ ?

ಪ್ರತಿ ವರ್ಷ ಜುಲೈ 7ರಂದು ವಿಶ್ವ ಚಾಕೋಲೆಟ್ ದಿನ ವನ್ನು ಆಚರಣೆ ಮಾಡಲಾಗುತ್ತದೆ. 1550ರಲ್ಲಿ ಜುಲೈ 7 ರಂದು ಯುರೋಪ್ ಚಾಕೋಲೆಟ್ ಎಂಬ ಅದ್ಭುತ ತಿನಿಸನ್ನು ಪರಿಚಯಿಸಿತು. ಆ ಬಳಿಕ ಜಗತ್ತಿನ ಇತರ ದೇಶಗಳಲ್ಲೂ ವೆರೈಟಿ ಚಾಕೋಲೇಟ್ಗಳನ್ನು ತಯಾರಿಸಲಾಯಿತು. ಜುಲೈ 7ರಂದು ಯುರೋಪ್ ನವರು ವೆರೈಟಿ ಚಾಕೋಲೆಟ್ ರೆಸಿಪಿಗಳನ್ನು ತಯಾರಿಸಿ ಸೇವಿಸುತ್ತಾರೆ. ಯುನೈಟೆಡ್ ಸ್ಟೇಟ್ನಲ್ಲಿ ಮಾತ್ರ ಅಕ್ಟೋಬರ್ 28ರಂದು ಚಾಕೋಲೆಟ್ ಡೇಯನ್ನು ಆಚರಿಸಲಾಗುತ್ತದೆ.
ಆರೋಗ್ಯಕ್ಕೆ ಒಳ್ಳೆಯದಲ್ಲ ಅನ್ನೋ ಕಾರಣಕ್ಕೆ ಪೋಷಕರು, ಮಕ್ಕಳು ಚಾಕೋಲೇಟ್ ತಿನ್ನುವುದನ್ನು ತಡೆಯುತ್ತಾರೆ. ಆದ್ರೆ ಚಾಕೋಲೇಟ್ಸ್ ತಿನ್ನೋಂದ್ರಿದಲೂ ಆರೋಗ್ಯಕ್ಕೆ ಹಲವಾರು ಪ್ರಯೋಜನಗಳಿವೆ. ಸಾಮಾನ್ಯವಾಗಿ ಎಲ್ಲರೂ ಡಾರ್ಕ್ ಚಾಕೊಲೇಟ್ಸ್ ಹೆಚ್ಚಾಗಿ ತಿನ್ನುತ್ತಾರೆ. ಆದ್ರೆ ಕೇವಲ ಡಾರ್ಕ್ ಚಾಕೋಲೇಟ್ ಮಾತ್ರವಲ್ಲ ವೈಟ್ ಚಾಕೊಲೇಟ್  ತಿನ್ನೋದ್ರಿಂದಾನೂ ಆರೋಗ್ಯ ಕ್ಕೆ ಅದೆಷ್ಟು ಪ್ರಯೋಜನವಿದೆ ಗೊತ್ತಾ ?
ಡಾರ್ಕ್ ಚಾಕೊಲೇಟ್ ಎಂಬ ಮ್ಯಾಜಿಕಲ್ ಪವರ್ ಇರುವ ಸಿಹಿ ಔಷಧ
ಒತ್ತಡ ನಿವಾರಕ: ಡಾರ್ಕ್ ಚಾಕಲೇಟ್ ನಲ್ಲಿ ಕಂಡುಬರುವ ಒಂದು ಘಟಕವೆಂದರೆ ತೆಯೋಬ್ರೊಮೈನ್. ತೆಯೋಬ್ರೊಮೈನ್ ಕೆಫೀನ್ ನಂತೆಯೇ ಇದೆ. ಈ ಚಾಕಲೇಟ್ ಸೇವನೆ ಮಾಡುವುದರಿಂದ ಸ್ಟ್ರೆಸ್ ಕಡಿಮೆಯಾಗುತ್ತದೆ. ಮನಸ್ಸಿನಿಂದ ಒತ್ತಡ ಕಡಿಮೆಯಾಗುವ ಕಾರಣ ಯಾವಾಗಲೂ ಖುಷಿಯಾಗಿರಲು ಸಾಧ್ಯವಾಗುತ್ತದೆ.
ಚರ್ಮ ಹೊಳೆಯುತ್ತೆ: ಸೂರ್ಯನ ಆಲ್ಟ್ರಾ ವಯಲೆಟ್ ಕಿರಣಗಳಿಂದ ಸ್ಕಿನ್ ಡ್ಯಾಮೇಜ್ ಆಗುವುದನ್ನು ರಕ್ಷಿಸಲು ಡಾರ್ಕ್ ಚಾಕಲೇಟ್ ಸಹಾಯ ಮಾಡುತ್ತದೆ. ನಿರಂತರವಾಗಿ ಚಾಕೋಲೇಟ್ ಸೇವಿಸುವುದರಿಂದ ಚರ್ಮ ಫಳಫಳ ಹೊಳೆಯುತ್ತದೆ. ಯಾವಾಗಲೂ ಕಾಂತಿಯುತವಾಗಿ ಕಂಗೊಳಿಸುತ್ತದೆ.
ನೆಗಡಿಗೆ ಔಷಧಿ: ನೆಗಡಿ ಇದ್ದರೆ ಚಾಕಲೇಟ್ ಆಧಾರಿತ ಔಷಧಿ ಸೇವನೆ ಮಾಡಿದರೆ, ಎರಡು ದಿನದಲ್ಲಿ ನೆಗಡಿ ಕಡಿಮೆಯಾಗುತ್ತದೆ. ಹೀಗಾಗಿ ಆಗಾಗ ಚಾಕೋಲೇಟ್ ತಿನ್ನುವ ಅಭ್ಯಾಸವಿದ್ದರೆ ಒಳ್ಳೆಯದು.
ರಕ್ತ ಹೆಪ್ಪುಗಟ್ಟುವಿಕೆ ತಡೆಯುತ್ತದೆ: ಡಾರ್ಕ್ ಚಾಕಲೇಟ್ ತಿನ್ನುವುದರಿಂದ ರಕ್ತದ ಒತ್ತಡ ಕಡಿಮೆಯಾಗುತ್ತದೆ. ಡಾರ್ಕ್ ಚಾಕೊಲೇಟ್ ರಕ್ತದ ಹರಿವನ್ನು ಸುಗಮಗೊಳಿಸುತ್ತದೆ ಮತ್ತು ರಕ್ತ ಹೆಪ್ಪುಗಟ್ಟುವಿಕೆಯನ್ನು ತಡೆಯುತ್ತದೆ.
ಕ್ಯಾನ್ಸರ್ ರೋಗಿಗಳಿಗೆ ಒಳ್ಳೆಯದು: ಡಾರ್ಕ್ ಚಾಕಲೇಟ್ ನಲ್ಲಿ ಪ್ರಬಲ ಆಂಟಿ ಆಕ್ಸಿಡೆಂಟುಗಳು ಅಧಿಕ ಪ್ರಮಾಣದಲ್ಲಿವೆ. ಇವು ಕ್ಯಾನ್ಸರ್ ರೋಗಿಗಳ ಆರೋಗ್ಯ ಮಟ್ಟ ಸುಧಾರಿಸಲು ಸಹಾಯ ಮಾಡುತ್ತವೆ.
ಮೆದುಳು ಚುರುಕಾಗುತ್ತದೆ: ಡಾರ್ಕ್ ಚಾಕಲೇಟ್ ಮೆದುಳಿಗೆ ಮತ್ತು ಹೃದಯಕ್ಕೆ ರಕ್ತದ ಹರಿವನ್ನು ಹೆಚ್ಚಿಸುತ್ತದೆ. ಇದರಿಂದ ಮೆದುಳು ಚುರುಕಾಗುತ್ತದೆ. ಜೊತೆಗೆ ಇದು ಪಾರ್ಶ್ವವಾಯು ಬರುವುದನ್ನು ತಡೆಯುವ ಗುಣವನ್ನು ಹೊಂದಿದೆ. ಕೊಕೊದ ಅಂಶ ಡಾರ್ಕ್ ಚಾಕಲೇಟ್ ಗಳಲ್ಲಿ ಹೆಚ್ಚಾಗಿರುವುದರಿಂದ ಮನಸಿನ ಮೇಲೆ ಧನಾತ್ಮಕ ಪರಿಣಾಮ ಬೀರುತ್ತದೆ.
ಹೃದಯ ಸಂಬಂಧಿ ಕಾಯಿಲೆಯ ಭಯವಿಲ್ಲ: ಕೊಕೊವನ್ನು ನಿಯಮಿತವಾಗಿ ಸೇವನೆ ಮಾಡುವುದರಿಂದ ಹೃದಯ ಸಂಬಂಧಿ ಕಾಯಿಲೆಯ ವಿರುದ್ಧ ಹೋರಾಡುವಲ್ಲಿ ಧನಾತ್ಮಕ ಪರಿಣಾಮ ಬೀರಬಹುದು ಎಂದು ಸಣ್ಣ ಪ್ರಮಾಣದ ಅಧ್ಯಯನಗಳು ಸೂಚಿಸುತ್ತವೆ.

Loading

Leave a Reply

Your email address will not be published. Required fields are marked *