ಬೆಂಗಳೂರು ;- ವಿದ್ಯಾರ್ಥಿಗಳನ್ನೇ ಟಾರ್ಗೆಟ್ ಮಾಡಿ ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪಿಯನ್ನು ಬೆಂಗಳೂರಿನ ಪೀಣ್ಯಾ ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಅಕಿಲ್ ಬಂಧಿತ ಆರೋಪಿ. ಇತನ ಬಳಿ 5ಕೆಜಿಗೂ ಅಧಿಕ ಗಾಂಜಾ ಜಪ್ತಿ ಮಾಡಲಾಗಿದೆ. ಇನ್ನು ಈ ಖತರ್ನಾಕ್ ಆರೋಪಿ ಕೈಗಾರಿಕಾ ಪ್ರದೇಶ, ಶಿವಪುರ ಕೆರೆ, ಗ್ರೌಂಡ್, ಸೇರಿದಂತೆ ಹಲವು ಕಡೆ ಮಾರಾಟ ಮಾಡುತ್ತಿದ್ದ.
ಆದರೆ, ಒಂದು ಸಾರಿ ವ್ಯಾಪಾರ ಮಾಡಿದ್ದ ಸ್ಥಳದಲ್ಲಿ ಮತ್ತೊಂದು ಬಾರಿ ಬರುತ್ತಿರಲಿಲ್ಲ. ಜೊತೆಗೆ ಹೊರ ರಾಜ್ಯದ ಕಾರ್ಮಿಕರು, ವಿದ್ಯಾರ್ಥಿಗಳನ್ನೇ ಇತ ಟಾರ್ಗೆಟ್ ಮಾಡಿಕೊಂಡಿದ್ದ. ಇದೀಗ ಪಿಎಸ್ಐ ಇಬ್ರಾಹಿಂ ನೇತೃತ್ವದಲ್ಲಿ ತಂಡ ರಚಿಸಿಕೊಂಡು ಪೆಡ್ಲರ್ನನ್ನ ಬಂಧಿಸಲಾಗಿದೆ. ನಾರ್ಕೋಟಿಕ್ ಡ್ರಗ್ಸ್ ಮತ್ತು ಸೈಕೋ ಟ್ರೋಪಿಕ್ ಸಬ್ ಸ್ಟ್ಯಾನ್ಸ್ ಅಕ್ಟ್ 1985ಅಡಿಯಲ್ಲಿ ಪೀಣ್ಯಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.