ಪ್ರಿಯತಮನ ಬ್ಲ್ಯಾಕ್ ಮೇಲ್ ಬೇಸತ್ತು 21 ವರ್ಷದ ಯುವತಿ ಆತ್ಮಹತ್ಯೆ..!

ಬೆಂಗಳೂರು ;- ಒಂದು ಕಡೆ ತನ್ನ ಪ್ರೀತಿಗೆ ತಂದೆ ತಾಯಿ ವಿರೋಧ, ಮತ್ತೊಂದು ಕಡೆ ಮದುವೆ ಆಗದೆ ಹೋದರೆ ಪ್ರಿಯತಮನ ಬ್ಲ್ಯಾಕ್ ಮೇಲ್. ಇದೆಲ್ಲದರಿಂದ ಮನನೊಂದ ಯುವತಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ರಾಜಧಾನಿ ಬೆಂಗಳೂರಿನಲ್ಲಿ ನಡೆದಿದೆ.
21 ವರ್ಷದ ಆಶಾ ಆತ್ಮಹತ್ಯೆ ಮಾಡಿಕೊಂಡ ಯುವತಿ ಎಂದು ಹೇಳಲಾಗಿದೆ.
ಆಶಾ ಓದು ಮುಗಿಸಿ ಮಂತ್ರಿ ಮಾಲ್ನಲ್ಲಿ ಕೆಲಸ ಮಾಡುತ್ತಿದ್ದಳು. ಐದು ವರ್ಷಗಳಿಂದ ಅವಿನಾಶ್ ಎನ್ನುವ ಯುವಕನನ್ನು ಪ್ರೀತಿಸುತ್ತಿದ್ದಳು. ಮಂತ್ರಿ ಮಾಲ್ನಲ್ಲಿ ಕೆಲಸ ಮಾಡುತ್ತಿದ್ದ ಆಶಾ ತನ್ನ ಪ್ರಿಯಕರ ಅವಿನಾಶ್ ಜೊತೆಗೆ ಪಾರ್ಕ್, ಸಿನಿಮಾಗಳಿಗೆ ಸುತ್ತಾಡುತ್ತಿದ್ದಳು ಎನ್ನಲಾಗಿದೆ. ಪ್ರೀತಿಯ ವಿಷಯವನ್ನು ಮನೆಯವರಿಗೂ ತಿಳಿಸಿದ್ದಳು ಎಂದು ತಿಳಿದುಬಂದಿದೆ. ‘ಪ್ರೀತಿ ಎಲ್ಲ ನಮಗೆ ಬೇಡಮ್ಮ’ ಎಂದು ಪೋಷಕರು ಆಕೆಗೆ ಬುದ್ಧಿ ಹೇಳಿದ್ದರು. ಆಶಾ ತನ್ನ ಪ್ರಿಯಕರನಿಗೆ ಮನೆಯವರ ವಿರೋಧದ ವಿಷಯ ತಿಳಿಸಿದ್ದಳು. ಇದರಿಂದ ರೊಚ್ಚಿಗೆದ್ದ ಅವಿನಾಶ್, ‘ನೀನು ನನಗೆ ಮೋಸ ಮಾಡ್ತಿದ್ದೀಯಾ. ..
ಇದೆಲ್ಲ ಪ್ರೀತಿ ಮಾಡೋಕು ಮುಂಚೆನೇ ಯೋಚನೆ ಮಾಡಬೇಕಿತ್ತು. ನೀನು ನನ್ನನ್ನು ಬಿಟ್ಟು ಹೋಗಬೇಡ. ಒಂದು ವೇಳೆ ಬಿಟ್ಟು ಹೋದರೆ ನಾನು ನಮ್ಮಿಬ್ಬರ ಫೋಟೋ ವೈರಲ್ ಮಾಡುತ್ತೇನೆ’ ಎಂದು ಬೆದರಿಸಿದ್ದಾನೆ. ಇದರಿಂದ ಮನನೊಂದ ಆಶಾ ಬೇಸರವಾಗಿ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡು ಸಾವನ್ನಪ್ಪಿದ್ದಾಳೆ. ಇತ್ತ ಮೃತಳ ಕುಟುಂಬಸ್ಥರು ತನ್ನ ಮಗಳ ಸಾವಿನ ನೋವಿನಲ್ಲೂ ಕಣ್ಣುಗಳನನ್ನು ದಾನ ಮಾಡಿ ಇಬ್ಬರಿಗೆ ಬೆಳಕಾಗಿದ್ದಾರೆ. ಸದ್ಯ ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಅವಿನಾಶ್ನನ್ನು ವಿಚಾರಣೆಗೆ ಒಳಪಡಿಸಿದ್ದಾಳೆ. ಪೊಲೀಸರ ತನಿಖೆಯಿಂದಷ್ಟೆ ಈ ಸಾವಿಗೆ ನೈಜ್ಯ ಕಾರಣ ತಿಳಿದುಬರಬೇಕಿದೆ.

Loading

Leave a Reply

Your email address will not be published. Required fields are marked *