ಕುಡಿಯುವ ನೀರಿನ ಟ್ಯಾಂಕ್‌́ನಲ್ಲಿ ಸತ್ತ ಎರಡು ಕೋತಿಗಳು ಪತ್ತೆ..!

ರಾಯಚೂರು: ಕುಡಿಯುವ ನೀರಿನ ಟ್ಯಾಂಕ್‌́ನಲ್ಲಿ ಸತ್ತ ಎರಡು ಕೋತಿಗಳು ಮತ್ತು ಒಂದು ನಾಯಿ ಪತ್ತೆಯಾಗಿರುವ ಆಘಾತಕಾರಿ ಘಟನೆ ಜಿಲ್ಲೆಯ ದೇವದುರ್ಗ ತಾಲೂಕಿನ ಖಾನಾಪೂರ ಗ್ರಾಮದಲ್ಲಿ ನಡೆದಿದೆ. ಕುಡಿಯುವ ನೀರಿನಲ್ಲಿ ವಾಸನೆ ಬಂದ ಹಿನ್ನೆಲೆ ಗ್ರಾಮಸ್ಥರು ಟ್ಯಾಂಕ್ನನ್ನು ಪರಿಶೀಲಿಸಿದ್ದಾರೆ. ಈ ವೇಳೆ ಎರಡು ಕೋತಿಗಳು ಸತ್ತು ಬಿದ್ದಿರುವುದು ಬೆಳಕಿಗೆ ಬಂದಿದೆ. ಬಳಿಕ ಸತ್ತ ಕೋತಿಗಳನ್ನು ಹೊರಗಡೆ ತೆಗೆದಿದ್ದಾರೆ. ಅಲ್ಲದೇ ಇದರಿಂದ ಈಗ ಗ್ರಾಮಸ್ಥರಲ್ಲಿ ಆತಂಕ ಶುರುವಾಗಿದೆ. ಈ ಸಂಬಂಧ ದೂರು ನೀಡಿದ್ರೂ, ಖಾನಾಪೂರ ಪಿಡಿಒ ಸ್ಥಳಕ್ಕೆ ಬಂದಿಲ್ಲ. ಇದಕ್ಕೆ ಗ್ರಾಮಸ್ಥರು ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.

Loading

Leave a Reply

Your email address will not be published. Required fields are marked *