ಫೇಮಸ್‌ ಬಾಡಿ ಬಿಲ್ಡರ್‌ ಜೋ ಲಿಂಡ್ನರ್‌ ನಿಧನ

ಬ್ಯಾಂಕಾಕ್‌: ಬಾಡಿ ಬಿಲ್ಡಿಂಗ್‌ ಮೂಲಕ ಸೋಶಿಯಲ್‌ ಮೀಡಿಯಾದಲ್ಲಿ ಸದ್ದು ಮಾಡುತ್ತಿದ್ದ ಬ್ಯಾಂಕಾಕ್ ನ ಖ್ಯಾತ ಬಾಡಿ ಬಿಲ್ಡರ್‌ ಜೋ ಲಿಂಡ್ನರ್‌ 30ನೇ ವಯಸ್ಸಿಗೆ ಕೊನೆಯುಸಿರೆಳೆದಿದ್ದಾರೆ.

ಲಿಂಡ್ನರ್ ನಿಧನದ ಸುದ್ದಿಯನ್ನು ಗೆಳತಿ ನಿಚಾ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.

ರಕ್ತನಾಳ ಸಮಸ್ಯೆಯಿಂದ ಬಳಲುತ್ತಿದ್ದ ಲಿಂಡ್ನರ್‌ ಅದಕ್ಕಾಗಿ ಚಿಕಿತ್ಸೆ ಪಡೆಯುತ್ತಿದ್ದು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾಗಿ ನಿಚಾ ಹೇಳಿದ್ದಾರೆ. ಕಳೆದ ಎರಡು ದಿನಗಳ ಹಿಂದೆ ಜೋ ಲಿಂಡ್ನರ್ ತಮ್ಮ ಇನ್ಸ್ಟಾಗ್ರಾಮ್‌ನಲ್ಲಿ ಫಿಟ್ನೆಸ್‌ ಕುರಿತ ವಿಡಿಯೋ ಹಂಚಿಕೊಂಡಿದ್ದರು ಎಂಬುದಾಗಿ ತಿಳಿಸಿದ್ದಾರೆ.

ಥಾಯ್‌ಲ್ಯಾಂಡ್‌ನಲ್ಲಿ ವೇಟ್ ಲಿಫ್ಟಿಂಗ್ ಹಾಗೂ ಬಾಡಿ ಬಿಲ್ಡಿಂಗ್ ಮೂಲಕ ಲೆಜೆಂಡ್‌ ಎಂದೇ ಗುರುತಿಸಿಕೊಂಡಿದ್ದ ಜೋ ಲಿಂಡ್ನರ್ ಸೋಶಿಯಲ್ ಮೀಡಿಯಾ ಮೂಲಕ ಅಭಿಮಾನಿಗಳಿಗೆ ಫಿಟ್ನೆಸ್‌ ಟಿಪ್ಸ್‌ ನೀಡುತ್ತಿದ್ದರು. ಜೊತೆಗೆ ಲಿಂಡ್ನರ್‌ ತಮ್ಮದೇ ಯುಟ್ಯೂಬ್‌ ಚಾನೆಲ್‌ ಆರಂಭಿಸಿ ತಾನು ಅಭ್ಯಾಸ ಮಾಡುವ ವೇಳೆ ಫಿಟ್ನೆಸ್‌ ಸಲಹೆಗಳನ್ನುಅದರಲ್ಲಿ ಹಂಚಿಕೊಳ್ಳುತ್ತಿದ್ದರು.

ತಮ್ಮದೇ ಅಭಿಮಾನಿ ಬಳಗ ಸೃಷ್ಟಿಸಿಕೊಂಡಿದ್ದ ಲಿಂಡ್ನರ್‌ ಯುಟ್ಯೂಬ್‌ನಲ್ಲಿ 940,000 ಚಂದಾದಾರರು ಹಾಗೂ ಇನ್ಸ್ಟಾಗ್ರಾಮ್‌ನಲ್ಲಿ 8.5 ದಶಲಕ್ಷ ಫಾಲೋವರ್ಸ್‌ಗಳನ್ನ ಹೊಂದಿದ್ದರು. ಪ್ರತಿದಿನ ಯುಟ್ಯೂಬ್‌ನಲ್ಲಿ ಫಿಟ್ನೆಸ್‌ ತರಬೇತಿ ಜೊತೆಗೆ ಆಹಾರ ಸೇವನೆಯ ಕ್ರಮದ ಬಗ್ಗೆಯೂ ಸಲಹೆ ನೀಡುತ್ತಿದ್ದರು. ಇದರಿಂದ ಥಾಯ್‌ಲ್ಯಾಂಡ್‌ನಲ್ಲಿ ಹೆಚ್ಚು ಜನಪ್ರಿಯತೆ ಗಳಿಸಿದ್ದರು. ಆದರೆ ಇದೀಗ ಲಿಂಡ್ನರ್ ನಿಧನ ಅಭಿಮಾನಿಗಳಿಗೆ ಅಘಾತಕ್ಕೊಳಗಾಗುವಂತೆ ಮಾಡಿದೆ.

Loading

Leave a Reply

Your email address will not be published. Required fields are marked *