ಟ್ರಾಫಿಕ್ ನಿರ್ವಹಣೆಗೆ ಕಾನೂನು ಮತ್ತು ಸುವ್ಯವಸ್ಥೆ ಪೊಲೀಸರ ಬಳಕೆಗೆ ಸೂಚನೆ: ಅಲೋಕ್ ಮೋಹನ್

ಬೆಂಗಳೂರುಒಂದು ತಿಂಗಳಲ್ಲಿ ನಗರದಲ್ಲಿ ಟ್ರಾಫಿಕ್ ನಿರ್ವಹಣೆ ಬಗ್ಗೆ ಒಂದು ಕ್ರಮ ಅಗಲಿದೆ ಎಂದು ಡಿಜಿ ಐಜಿಪಿ ಅಲೋಕ್ ಮೋಹನ್ (Alok Mohan) ಹೇಳಿದರು. ನಗರದಲ್ಲಿ ಟ್ರಾಫಿಕ್ (Bengaluru Traffic) ಸಮಸ್ಯೆ ಹೆಚ್ಚುತ್ತಿರುವ ಹಿನ್ನೆಲೆ ಇಂದು ಬೆಂಗಳೂರು ಪೊಲೀಸ್ ಆಯುಕ್ತರ ಕಚೇರಿಯಲ್ಲಿ ನಡೆದ ಹಿರಿಯ ಅಧಿಕಾರಿಗಳ ಸಭೆಯ ನಂತರ ಮಾತನಾಡಿದ ಅವರು,

ಟ್ರಾಫಿಕ್ ನಿರ್ವಹಣೆಗೆ ಕಾನೂನು ಮತ್ತು ಸುವ್ಯವಸ್ಥೆ ಪೊಲೀಸರ ಬಳಕೆಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು. ಸಭೆಯಲ್ಲಿ ವಿಶೇಷವಾಗಿ ಟ್ರಾಫಿಕ್ ವಿಚಾರದ ಬಗ್ಗೆ ಚರ್ಚೆ ಮಾಡಲಾಗಿದೆ. ಎಲ್ಲೆಂದರಲ್ಲಿ ವಾಹನ ಪಾರ್ಕ್ ಮಾಡುವವರ ಬಗ್ಗೆ ಚರ್ಚೆ ಮಾಡಲಾಗಿದೆ. ಒಂದು ತಿಂಗಳಲ್ಲಿ ನಗರದಲ್ಲಿ ಟ್ರಾಫಿಕ್ ನಿರ್ವಹಣೆ ಬಗ್ಗೆ ಒಂದು ಕ್ರಮ ಅಗಲಿದೆ.

ಸಂಚಾರ ನಿರ್ವಹಣೆಗೆ ಹೆಚ್ಚುವರಿ ಹೋಮ್ ಗಾರ್ಡ್ಸ್ ನಿಯೋಜನೆ ಮಾಡಲಾಗುವುದು ಎಂದರು. ಪೀಕ್ ಟೈಮ್​ನಲ್ಲಿ ಟ್ರಾಫಿಕ್ ಹೆಚ್ಚು ಇರುತ್ತದೆ. ಈ ವೇಳೆ ಕಾನೂನು ಸುವ್ಯವಸ್ಥೆ ಪೊಲೀಸರು ಕೂಡ ಫೀಲ್ಡ್​​ನಲ್ಲಿ ಕಾರ್ಯ ನಿರ್ವಹಿಸುತ್ತಾರೆ. ಸಾರ್ವಜನಿಕರಿಗೆ ತೊಂದರೆ ಆಗಬಾರದು ಎಂಬ ನಿಟ್ಟಿನಲ್ಲಿ ಲಾ ಆಂಡ್ ಆರ್ಡರ್ ಪೊಲೀಸರನ್ನ ಟ್ರಾಫಿಕ್ ಕೆಲಸಕ್ಕೆ ಬಳಸಿಕೊಳ್ಳಲು ಸೂಚನೆ ನೀಡಲಾಗಿದೆ ಎಂದರು.

Loading

Leave a Reply

Your email address will not be published. Required fields are marked *