ಬೆಂಗಳೂರು: ಸಮ್ಮಿಶ್ರ ಸರ್ಕಾರದಲ್ಲಿ ಸಿಎಂ ಆಗಿದ್ದ ನನಗೆ ವರ್ಗಾವಣೆ (Transfer) ಮಾಡೋ ಅಧಿಕಾರವೇ ಇರಲಿಲ್ಲ ಅಂತ ಮಾಜಿ ಸಿಎಂ ಕುಮಾರಸ್ವಾಮಿ (HD Kumaraswamy), ಸಿಎಂ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಸಿಎಂ ಕಚೇರಿಯಲ್ಲಿ ವರ್ಗಾವಣೆ ದಂಧೆ ಎಂದು ಆರೋಪ ಮಾಡಿದ್ದ ಕುಮಾರಸ್ವಾ ಮಿಗೆ ತಮ್ಮ ಅವಧಿಯಲ್ಲಿ ಆಗಿದ್ದನ್ನೇ ಈಗ ಹೇಳ್ತಿದ್ದಾರೆ ಎಂಬ ಸಿದ್ದರಾಮಯ್ಯ (Siddaramaiah) ಹೇಳಿಕೆಗೆ ಪ್ರತಿಕ್ರಿಯಿಸಿ ಅವರು ಮಾತನಾಡಿದರು.
ಸಿದ್ದರಾಮಯ್ಯ ಅವರು ನೆನಪು ಮಾಡಿಕೊಳ್ಳಬೇಕು. ನಾನು ಸಿಎಂ ಆಗಿದ್ದಾಗ ನಿಮ್ಮ ಮಂತ್ರಿಗಳು ನನ್ನನ್ನ ಯಾವ ರೀತಿ ನಡೆಸಿಕೊಂಡಿದ್ದಾರೆ ಅನ್ನೋದನ್ನ ಒಮ್ಮೆ ನೆನಪು ಮಾಡಿಕೊಳ್ಳಬೇಕು. ನಿಮ್ಮ ಪಕ್ಷ ಸಚಿವರು ಪೊಗರುದಸ್ತು ಇಲಾಖೆ ಇಟ್ಟುಕೊಂಡಿದ್ರು. ಏನ್ ಜನರ ಕೆಲಸ ಮಾಡಲಿಕ್ಕೆ ಇಟ್ಟುಕೊಂಡಿದ್ರಾ ಇಲಾಖೆಗಳನ್ನ? ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ನನಗೆ ವರ್ಗಾವಣೆ ಮಾಡೋ ಅಧಿಕಾರವೇ ಇರಲಿಲ್ಲ. ಕಾಂಗ್ರೆಸ್ ಅವರು ಹೇಳಿದಂತೆ ನಾನು ವರ್ಗಾವಣೆ ಮಾಡಬೇಕಿತ್ತು ಅಂತಾ ತಿಳಿಸಿದರು.