ಇತ್ತೀಚೆಗೆ ರಾಮ್ ಚರಣ್ ಉಪಾಸನ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ನಿನ್ನೆ ತಾನೆ ಮಗಳಿಗೆ ನಾಮಕರಣ ಮಾಡಲಾಗಿದ್ದು ಇದೀಗ ರಾಮ್ ಚರಣ್ ಪುತ್ರಿಗೆ ಜಗತ್ತಿನ ಅತೀ ಶ್ರೀಮಂತರ ಪಟ್ಟಿಯಲ್ಲಿರುವ ಭಾರತೀಯ ಮುಖೇಶ್ ಅಂಬಾನಿ ದುಬಾರಿ ಉಡುಗೊರೆಯನ್ನು ನೀಡಿದ್ದಾರೆ.
ಮುಖೇಶ್ ಅಂಬಾನಿ ದಂಪತಿಗಳು ರಾಮ್ ಚರಣ್ ಮಗಳಿಗೆ ಒಂದು ಕೋಟಿ ರೂಪಾಯಿ ಬೆಲೆಬಾಳುವ ಚಿನ್ನದ ತೊಟ್ಟಿಲನ್ನು ಉಡುಗೊರೆಯಾಗಿ ನೀಡಿದ್ದಾರೆ ಎಂದು ಸುದ್ದಿ ಹರಿದಾಡುತ್ತಿದೆ. ಆದರೆ ಈ ಬಗ್ಗೆ ರಾಮ್ ಚರಣ್ ಆಗಲಿ ಅಥವಾ ಅಂಬಾನಿಯಾಗಲಿ ಯಾವುದೇ ಮಾಹಿತಿ ನೀಡಿಲ್ಲ.
ಮಗಳು ಹುಟ್ಟಿದ ದಿನದಂದು ಮಗಳಿಗಾಗಿ ಸಂಗೀತ ನೀಡಿದ್ದ ಆರ್.ಆರ್.ಆರ್ ಗಾಯಕನ ಕುರಿತು ರಾಮ್ ಚರಣ್ ಬರೆದುಕೊಂಡಿದ್ದಾರೆ. ಆದ್ರೆ ಮುಖೇಶ್ ಅಂಬಾನಿ ನೀಡಿರುವ ಯಾವುದೇ ಉಡುಗೊರೆಯ ಕುರಿತು ರಾಮ್ ಚರಣ್ ಸೋಷಿಯಲ್ ಮೀಡಯಾದಲ್ಲಿ ಬರೆದುಕೊಂಡಿಲ್ಲ.