ದೊಡ್ಡಬಳ್ಳಾಪುರ: ಕುಡಿದು ಬಂದು ನಿತ್ಯ ಮಗನಿಂದ ಕಿರುಕುಳ ಹಿನ್ನೆಲೆ ಮಗನ ಕಿರುಕುಳ ತಾಳಲಾರದೆ ತಂದೆಯೇ ಮಗನನ್ನು ಕೊಲೆ ಮಾಡಿದ ಘಟನೆ ನಡೆದಿದೆ. ದೊಡ್ಡಬಳ್ಳಾಪುರ ತಾಲೂಕಿನ ವಾಣಿಗರಹಳ್ಳಿ ಗ್ರಾಮದಲ್ಲಿ ಕೈ-ಕಾಲು ಕಟ್ಟಿ ಹಾಕಿ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಕೊಲೆ ಮಾಡಲಾಗಿದೆ. ಜಯರಾಮಯ್ಯ (58) ಎಂಬುವವರು ಆದರ್ಶ್ (28) ಎಂಬ ತಮ್ಮ ಮಗನನ್ನೇ ಬೆಂಕಿ ಹಚ್ಚಿ ಕೊಲೆ ಮಾಡಿದ್ದಾರೆ. ಮಗ ಆದರ್ಶ್ ದಿನನಿತ್ಯ ಕುಡಿದು ಬಂದು ಮನೆಯಲ್ಲಿ ಗಲಾಟೆ ಮಾಡ್ತಿದ್ದನಂತೆ. ಇತ್ತೀಚೆಗೆ ತಾಯಿಯ ಬಳಿ ಹಣ ಕೇಳಿ ಕೊಡಲಿಲ್ಲ ಅಂತ ತಾಯಿ ಮೇಲೆ ಹಲ್ಲೆ ಮಾಡಿದ್ದನಂತೆ. ಇದ್ರಿಂದ ಬೇಸತ್ತು ರಾತ್ರಿ ಹೊಡೆದು ಕೊಲೆ ಮಾಡಿ ಬೆಂಕಿ ಹಚ್ಚಿದ್ದಾರೆ.