ಹಾವು ಕಡಿದು ಮೃತಪಟ್ಟ ಎಂದು ಅಂತ್ಯಕ್ರಿಯೆ ಮಾಡಲು ಸಿದ್ದತೆ ಮಾಡಿಕೊಳ್ಳುವಾಗ ಎದ್ದು ಕುಳಿತ

ನರಗುಂದ: ಕುಡಿದ ಮತ್ತಿನಲ್ಲಿ ಹಾವು ಹಿಡಿಯಲು ಹೋದವನಿಗೆ ಹಾವು ಕಡಿದು ಮೃತಪಟ್ಟಿದ್ದಾನೆಂದು ತಿಳಿದು ಅಂತ್ಯಕ್ರಿಯೆಗೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಆದರೆ, ಸತ್ತನೆಂದು ತಿಳಿದಿದ್ದ ವ್ಯಕ್ತಿ ಎದ್ದು ಕುಳಿತ ಘಟನೆ ತಾಲೂಕಿನ ಹಿರೇಕೊಪ್ಪ ಗ್ರಾಮದಲ್ಲಿ ನಡೆದಿದೆ. ಹಿರೇಕೊಪ್ಪದ ಸಿದ್ದಪ್ಪ ನರಸಿಂಗಪ್ಪ ಬಳಗಾನೂರ (44) ಪವಾಡ ಸದೃಶ ರೀತಿಯಲ್ಲಿ ಬದುಕುಳಿದಿದ್ದಾನೆ. ಈತ ಹಿರೇಕೊಪ್ಪ ಗ್ರಾಮದಲ್ಲಿ ಮೃತಪಟ್ಟಿದ್ದ ಬಸವಂತಪ್ಪ ಶಿವಪ್ಪ ಅಂಗಡಿ ಎಂಬುವರ ಮನೆಗೆ ಗುರುವಾರ ಭಜನೆ ಕಾರ್ಯಕ್ರಮಕ್ಕೆ ಹೋಗಿದ್ದ.
ಇದೇ ವೇಳೆ ಮಧ್ಯಾಹ್ನ ಗ್ರಾಮದ ಜಗದೀಶ ಬಡಿಗೇರ ಎಂಬುವರ ಮನೆಯಲ್ಲಿ ನಾಗರ ಹಾವು ಕಾಣಿಸಿಕೊಂಡಿತ್ತು. ಕುಡಿದ ಮತ್ತಿನಲ್ಲಿದ್ದ ಸಿದ್ದಪ್ಪ ಹಾವನ್ನು ಯಾವುದೇ ಸುರಕ್ಷತೆ ಪರಿಕರಗಳಿಲ್ಲದೇ ಬರಿಗೈಯಲ್ಲಿ ಹಿಡಿದಿದ್ದ. ಗ್ರಾಮಸ್ಥರು ಬುದ್ಧಿವಾದ ಹೇಳಿದರೂ ಕೇಳದ ಸಿದ್ದಪ್ಪ, ‘ನನ್ನ ಕೈಯಲ್ಲಿ ಗರುಡವಿದೆ. ನನಗೇನೂ ಆಗುವುದಿಲ್ಲ’ ಎಂದು ಭಂಡತನ ಮೆರೆಯಲು ಹೋಗಿ ಹಾವಿನಿಂದ ನಾಲ್ಕು ಬಾರಿ ಕೈಗೆ ಕಚ್ಚಿಸಿಕೊಂಡಿದ್ದ.
ದೇಹದಲ್ಲಿ ವಿಷವೇರಿದ ಬಳಿಕ ನರಳಾಡುತ್ತಿದ್ದ ಆತನನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಸಿದ್ದಪ್ಪ ಮೃತಪಟ್ಟಿದ್ದಾನೆ ಎಂದು ಊರಲ್ಲಿ ಸುದ್ದಿ ಹರಡಿತ್ತು. ಹೀಗಾಗಿ ಸಿದ್ದಪ್ಪನ ಅಂತ್ಯಕ್ರಿಯೆಗಾಗಿ ಆತನ ಕುಟುಂಬಸ್ಥರು 4 ಕ್ವಿಂಟಾಲ್ ಕಟ್ಟಿಗೆ ಸಿದ್ಧಪಡಿಸಿಕೊಂಡು ಸಂಬಂಧಿಕರಿಗೆ ಸಾವಿನ ಸುದ್ದಿ ತಲುಪಿಸಿದ್ದರು. ಆದರೆ, ಸಕಾಲಿಕ ಚಿಕಿತ್ಸೆಯ ಬಳಿಕ ಸಿದ್ದಪ್ಪ ಬದುಕುಳಿದಿದ್ದಾನೆ.

Loading

Leave a Reply

Your email address will not be published. Required fields are marked *