ಬೆಂಗಳೂರು: ಜೆ.ಪಿ. ನಗರದ ಶ್ರೀ ಸತ್ಯಗಣಪತಿ ಶಿರಡಿ ಸಾಯಿ ಟ್ರಸ್ಟ್ ನಿಂದ ಜುಲೈ 3 ರಂದು ವಿಶೇಷ ಗುರುಪೂರ್ಣಿಮೆ ಆಚರಿಸಲಾಗುತ್ತಿದೆ. ಶಿರಡಿ ಸಾಯಿ ಬಾಬಾರಿಗೆ ವಿಶೇಷ ಅಲಂಕಾರ, ವೈಭವದ ಧಾರ್ಮಿಕ ಪೂಜಾ ವಿಧಿ ವಿಧಾನಗಳನ್ನು ಏರ್ಪಡಿಸಲಾಗಿದೆ.
ಬಾಬಾರನ್ನು ಬಗೆ ಬಗೆಯ ಹೂವುಗಳು, ಹಣ್ಣುಗಳು, ಬಾದಾಮಿ, ಖರ್ಜೂರ, ಒಣಹಣ್ಣುಗಳು, ಬೆಲ್ಲದಿಂದ ಸಿಂಗರಿಸುತ್ತಿದ್ದು, ಕೆಂದು ಬಣ್ಣದ ಎಳನೀರಿನಿಂದ ವಿಶೇಷ ಅಲಂಕಾರ ಮಾಡಲಾಗುತ್ತಿದೆ ಶ್ರೀ ಸತ್ಯಗಣಪತಿ ಶಿರಡಿ ಸಾಯಿ ಟ್ರಸ್ಟ್ ಅಧ್ಯಕ್ಷ ಲೋಕರಾಜ್ ತಿಳಿಸಿದ್ದಾರೆ.
ಗುರು ಪೂರ್ಣಿಮೆಯಂದು ಶಿರಡಿ ಸಾಯಿ ಬಾಬಾ ಅವರಿಗೆ ಅಭಿಷೇಕ, ಹೋಮ, ಪ್ರಸಾದ ಸೇವೆ, ಅಲಂಕಾರ ಸೇವೆ, ಸರ್ವ ಸೇವೆ ಒಳಗೊಂಡಂತೆ ಎಲ್ಲಾ ರೀತಿಯ ಪೂಜಾ ವಿಧಿ ವಿಧಾನಗಳನ್ನು ಏರ್ಪಡಿಸಲಾಗಿದೆ. ಸೋಮವಾರ ಬೆಳಿಗ್ಗೆಯಿಂದ ರಾತ್ರಿವರೆಗೆ ಭಕ್ತರಿಗೆ ನಿರಂತರವಾಗಿ ಪ್ರಸಾದ ವಿತರಣೆ ಮಾಡಲಾಗುತ್ತಿದೆ ಎಂದು ದೇವಸ್ಥಾನದ ಟ್ರಸ್ಟ್ ನ ಆಡಳಿತ ಮಂಡಳಿ ಮಾಹಿತಿ ನೀಡಿದೆ.
ಪ್ರತಿವರ್ಷ ಶ್ರೀ ಸತ್ಯಗಣಪತಿ ಶಿರಡಿ ಸಾಯಿ ಟ್ರಸ್ಟ್ ನಿಂದ ಅದ್ದೂರಿಯಾಗಿ ಗುರು ಪೂರ್ಣಿಮೆ ಆಚರಿಸುತ್ತಿದ್ದು, ಈ ಬಾರಿ ಮತ್ತಷ್ಟು ಸಂಭ್ರಮ ಮತ್ತು ವಿಶೇಷತೆಗಳೊಂದಿಗೆ ಸಾಯಿ ಬಾಬಾರ ಸ್ಮರಣೆಗೆ ವ್ಯವಸ್ಥೆ ಮಾಡಲಾಗಿದೆ. ಬಾಬಾರ ‘’ಸಬ್ ಕಾ ಮಾಲೀಕ್ ಏಕ್ ಹೇ’’ ಎಂಬ ಪರಿಕಲ್ಪನೆಯಡಿ ಬಡವ, ಬಲ್ಲಿದ ಬೇಧ-ಭಾವವಿಲ್ಲದೇ ಎಲ್ಲಾ ಸಮುದಾಯದವರಿಗೆ ಮುಕ್ತ ಸ್ವಾಗತ ಕೋರುತ್ತಿರುವುದಾಗಿ ಟ್ರಸ್ಟ್ ಅಧ್ಯಕ್ಷ ಲೋಕರಾಜ್ ಮನವಿ ಮಾಡಿದ್ದಾರೆ.