ಹಿರಿಯ ನಿರ್ದೇಶಕ ಸಿ.ವಿ ಶಿವಶಂಕರ್ ಹೃದಯಾಘಾತದಿಂದ ನಿಧನ

ಬೆಂಗಳೂರು: ಕನ್ನಡ ಚಿತ್ರರಂಗಕ್ಕೆ ಮತ್ತೊಂದು ಬರಸಿಡಿಲು ಹೊಡೆದಂತಾಗಿದೆ ಅದೇನೆಂದರೆ ಹಿರಿಯ ನಿರ್ದೇಶಕ ಸಿ.ವಿ ಶಿವಶಂಕರ್ ಅವರು ಹೃದಯಾಘಾತದಿಂದ ಇಂದು ಮಧ್ಯಾಹ್ನ ಎರಡು ಗಂಟೆ ವೇಳೆಗೆ ಕೊನೆಯುಸಿರೆಳೆದಿದ್ದಾರೆ.
“ಸಿರಿವಂತನಾದರ ಕನ್ನಡ ನಾಡಲ್ಲಿ ಮೆರೆವೆ” , ಬೆಳೆದೆ ನೋಡ ಬೆಂಗಳೂರ ನಾಡ ಹಾಗೂ ಇನ್ನಷ್ಟು ಸೂಪರ್ ಹಿಟ್ ಹಾಡುಗಳ ಸಾಹಿತಿ ರಚಿಸಿದ್ದು ಮನೆ ಕಟ್ಟಿ ನೋಡು ಸಿನಿಮಾದ ನಿರ್ಮಾಪಕರಾಗಿ ಸಹ ಕೆಲಸ ಮಾಡಿದ್ದಾರೆ.
ಅದಲ್ಲದೆ ಸಹ ನಿರ್ದೇಶಕರಾಗಿ ಕೆಲ್ಸಾ ಮಾಡಿದ್ದ ಅವ್ರು 60 ದಶಕದ ಪ್ರತಿಭೆ ಎಂದರೆ ಸುಳ್ಳಾಗುವುದಿಲ್ಲ
ಮನೆಕಟ್ಟಿ ನೋಡು, ಪದವೀಧರ , ಹೊಯ್ಸಳ , ಮಹಾತಪಸ್ವಿ , ವೀರಮಹಾದೇವ , ಕನ್ನಡ ಕುವರ ಸೇರಿದಂತೆ ಅನೇಕ ಸಿನಿಮಾಗಳನ್ನ ಸಹ ನಿರ್ದೇಶನ ಮಾಡಿದ್ದಾರೆ.
ಇತ್ತೀಚಿಗೆ ಹಿರಿಯ ನಟಿ ಲೀಲಾವತಿ ಅವರ ಮನೆಯಲ್ಲಿ ನಡೆದ ಔತಣ ಕೂಟದಲ್ಲಿ ಸಹ ಭಾಗಿಯಾಗಿದ್ದರು.

Loading

Leave a Reply

Your email address will not be published. Required fields are marked *