ಕೇವಲ ವಸ್ತುಗಳಿಗಾಗಲಿ, ಘಟನೆಗಳಿಗಾಗಲಿ ಸೀಮಿತವಾಗಿಲ್ಲ. ಬದಲಾಗಿ, ಕೆಲವೊಂದು ಜೀವಿಗಳನ್ನು ಕೂಡ ಒಳಗೊಂಡಿದೆ. ಪ್ರಾಣಿಗಳಿಗೆ ಸಂಬಂಧಿಸಿದಂತೆ ನಾವು ಹೆಚ್ಚಾಗಿ ಬೆಕ್ಕುಗಳು ನಮ್ಮ ದಾರಿಗೆ ಅಡ್ಡ ಬಂದರೆ ಅದನ್ನು ಅಶುಭ ಸಂದರ್ಭವೆಂದು ಪರಿಗಣಿಸುತ್ತೇವೆ. ಬೆಕ್ಕುಗಳ ಬಗೆಗಿನ ಈ ನಂಬಿಕೆಯು ನಿನ್ನೆ, ಮೊನ್ನೆಯದಲ್ಲ.
ಬದಲಾಗಿ ನಮ್ಮ ಪೂರ್ವಜರು ನಂಬಿಕೊಂಡು ಬಂದ ನಂಬಿಕೆಯಾಗಿದೆ. ಮಾನವ ಜೀವನಕ್ಕೆ ಸಂಬಂಧಿಸಿದಂತೆ ಬೆಕ್ಕುಗಳ ಕುರಿತಿರುವ ನಂಬಿಕೆ ಬಗ್ಗೆ ನಾವೀಗ ತಿಳಿದುಕೊಳ್ಳೋಣ.
ನಂಬಿಕೆ:
ನಂಬಿಕೆಗಳ ಪ್ರಕಾರ, ನೀವು ಯಾವುದೋ ಒಂದು ಕೆಲಸದ ಮೇಲೆ ಹೊರಗಡೆ ಹೊರಟಾಗ ಅದೇ ಸಂದರ್ಭಕ್ಕೆ ನಿಮ್ಮ ದಾರಿಗೆ ಅಡ್ಡಲಾಗಿ ಬೆಕ್ಕೊಂದು ಹಾದುಹೋದರೆ ಅದನ್ನು ಅಶುಭವೆಂಬ ನಂಬಿಕೆಯಿದೆ. ಬೆಕ್ಕು ದಾರಿಗೆ ಅಡ್ಡ ಹೋಗುವುದು ಅಪಶಕುನವೆಂದು ನಂಬಿದವರು ಇದಕ್ಕೆ ನಾನಾ ರೀತಿಯ ಕ್ರಮಗಳನ್ನು ಕೈಗೊಳ್ಳುತ್ತಾರೆ. ಅವರ ಪ್ರಕಾರ ನಾವು ಈ ರೀತಿ ಮಾಡಿದರೆ ಅಶುಭ ಶಕುನವು ದೂರಾಗುತ್ತದೆ ಎಂದು ನಂಬುತ್ತಾರೆ. ಬೆಕ್ಕು ದಾರಿಗೆ ಅಡ್ಡಬಂದಾಗ ಸಾಮಾನ್ಯವಾಗಿ ಜನರು ಅಲ್ಲೇ ಸ್ವಲ್ಪ ಸಮಯ ನಿಲ್ಲುತ್ತಾರೆ. ನಂತರ ಯಾವುದೋ ವ್ಯಕ್ತಿ ವಿರುದ್ಧ ದಿಕ್ಕಿನಿಂದ ಇವರನ್ನು ಹಾದು ಹೋದ ನಂತರ ಅಲ್ಲಿಂದ ಮುಂದೆ ಸಾಗುತ್ತಾರೆ. ಇದರಿಂದ ಬೆಕ್ಕು ಸೂಚಿಸಿದ ಅಶುಭ ಶಕುನವು ದೂರಾಗುತ್ತದೆ.
ಕೆಲವರು ಬೆಕ್ಕು ಹಾದುಹೋದಾಗ ಅಲ್ಲೇ ಸ್ವಲ್ಪ ಸಮಯ ನಿಂತರೆ, ಇನ್ನು ಕೆಲವರು ತಾವು ನಿಂತ ಸ್ಥಳದಲ್ಲೇ ಮೂರು ಸುತ್ತು ಸುತ್ತುತ್ತಾರೆ ಇದರಿಂದ ಕೆಟ್ಟ ಶಕುನವು ದೂರಾಗಬಹುದೆನ್ನುವ ನಂಬಿಕೆಯಿದೆ. ಪ್ರತಿಯೊಬ್ಬ ವ್ಯಕ್ತಿಯು ತಮ್ಮ ನಂಬಿಕೆಯ ಆಧಾರದ ಮೇಲೆ ಅಶುಭ ಶಕುನಕ್ಕೆ ಪರಿಹಾರವನ್ನು ಕಂಡುಕೊಳ್ಳುತ್ತಾರೆ. ಆದರೆ ನಿಮಗೆ ಗೊತ್ತಿರದ ಒಂದು ಆಶ್ಚಯಕರ ಸಂಗತಿಯಿದೆ. ಪ್ರತಿಯೊಂದು ಸಂದರ್ಭದಲ್ಲೂ ಬೆಕ್ಕು ದಾರಿಗೆ ಅಡ್ಡಹೋಗುವುದು ಅಸಹ್ಯಕರವಲ್ಲ.
ಬೆಕ್ಕುಯಾವಸಂದರ್ಭಗಳಲ್ಲಿದುರಾದೃಷ್ಟವನ್ನುಸೂಚಿಸುತ್ತದೆ:
ಕೆಲವೊಂದು ನಂಬಿಕೆಗಳ ಪ್ರಕಾರ, ನೀವು ಯಾವುದಾದರು ಕೆಲಸಕ್ಕೆ ಹೋಗುವಾಗ ದಾರಿಯಲ್ಲಿ ಬೆಕ್ಕು ನಿಮ್ಮ ಎಡದಿಂದ ಬಲಕ್ಕೆ ಹಾದುಹೋದರೆ ಅದನ್ನು ಅಸಹ್ಯವೆಂದು ಪರಿಗಣಿಸಲಾಗುತ್ತದೆ. ಬೆಕ್ಕು ಎಡದಿಂದ ಬಲಕ್ಕೆ ಹಾದುಹೋಗುವಾಗ ನಕಾರಾತ್ಮಕತೆಯನ್ನು ಬಿಟ್ಟುಹೋಗುತ್ತದೆ. ಇದರಿಂದ ಆ ವ್ಯಕ್ತಿಗೆ ಕೆಟ್ಟದ್ದಾಗಬಹುದು ಅಥವಾ ಸದ್ಯದಲ್ಲೇ ಅವರು ಕೆಟ್ಟ ಸುದ್ಧಿಗಳನ್ನು ಕೇಳಬಹುದಾಗಿದೆ. ಒಂದು ವೇಲೆ ನೀವು ಹೋಗುವ ದಾರಿಯಲ್ಲಿ ಅಥವಾ ಮನೆಯಲ್ಲಿ ಬೆಕ್ಕು ಅಳುತ್ತಿದ್ದರೆ ಅದು ನಿಮ್ಮ ಪ್ರೀತಿ ಪಾತ್ರರ ಸಾವನ್ನು ಸೂಚಿಸುತ್ತದೆ ಎನ್ನುವ ನಂಬಿಕೆಯಿದೆ. ಅದೇ ಬೆಕ್ಕು ಬಲದಿಂದ ಎಡಕ್ಕೆ ಹಾದುಹೋದರೆ ಅದನ್ನು ಅಶುಭವೆಂದು ಪರಿಗಣಿಸಲಾಗುವುದಿಲ್ಲ.
ಬೆಕ್ಕಿಗೆಸಂಬಂಧಿಸಿದಇತರನಂಬಿಕೆಗಳು:
1) ಈಗಾಗಲೇ ಹೇಳಿರುವ ಹಾಗೇ ನಿಮ್ಮ ಮನೆಯಲ್ಲಿ ಅಥವಾ ನಿಮ್ಮ ಸುತ್ತಲಿನ ಸ್ಥಳಗಳಲ್ಲಿ ಬೆಕ್ಕು ಅಳಲು ಪ್ರಾರಂಭಿಸಿದರೆ ಅದು ದೊಡ್ಡ ಅಶುಭ ಘಟನೆಯಾಗಿದೆ.
2) ನಿಮ್ಮ ಮನೆಯಲ್ಲಿ ಬೆಕ್ಕುಗಳು ಜಗಳವಾಡಿದರೆ ಅದು ನಿಮ್ಮ ಆರ್ಥಿಕ ನಷ್ಟವನ್ನು ಸೂಚಿಸುತ್ತದೆ.
3) ಬೆಕ್ಕು ಮಲಗಿಕೊಂಡು ತನ್ನ ತಲೆಯನ್ನು ತಾನೇ ನೆಕ್ಕುವುದನ್ನು ನೋಡಿದರೆ ಆ ಮನೆಯ ಸದಸ್ಯರು ಕಾನೂನು ವಿಷಯಗಳಲ್ಲಿ ಸಿಲುಕಿಕೊಳ್ಳಬಹುದು.
4) ಬೆಕ್ಕು ಮಲಗಿಕೊಂಡು ತನ್ನ ಪಾದಗಳನ್ನು ನೆಕ್ಕುತ್ತಿರುವುದನ್ನು ನೋಡಿದರೆ ಅದು ಅ ವ್ಯಕ್ತಿಯ ಆರೋಗ್ಯದ ಸಮಸ್ಯೆಗಳನ್ನು ಸೂಚಿಸುತ್ತದೆ.
5) ದೀಪಾವಳಿ ಹಬ್ಬದಂದು ಅಥವಾ ದೀಪಾವಳಿ ಹಬ್ಬದ ಸಮಯದಲ್ಲಿ ಬೆಕ್ಕು ಮನೆಯನ್ನು ಪ್ರವೇಶಿಸಿದರೆ ಅದು ಶುಭದ ಸಂಕೇತವಾಗಿದೆ. ಇದರರ್ಥ ಲಕ್ಷ್ಮಿ ದೇವಿಯು ನಿಮ್ಮ ಮನೆಯನ್ನು ಪ್ರವೇಶಿಸಿದ್ದಾಳೆ ಎನ್ನುವುದಾಗಿದೆ.
6) ಮನೆಯಲ್ಲಿ ಬೆಕ್ಕುಗಳು ಮರಿ ಹಾಕಿದರೆ ಅದು ಶುಭ ಸಂಕೇತವಾಗಿದೆ.
7) ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಮನೆಯಲ್ಲಿ ಬೆಕ್ಕನ್ನು ಸಾಕುವುದರಿಂದ ಜಾತಕದಲ್ಲಿರುವ ರಾಹುವಿನ ಅಡ್ಡಪರಿಣಾಮ ಕಡಿಮೆಯಾಗುತ್ತದೆ.
ಪ್ರಪಂಚದಲ್ಲಿನ ಎಲ್ಲಾ ಜೀವಿಗಳು ದೇವರ ಸೃಷ್ಟಿಯೆಂದು ಪರಿಗಣಿಸಲಾಗುತ್ತದೆ. ಕೆಲವು ಜೀವಿಗಳು ನಮಗೆ ಕೆಟ್ಟದ್ದಾಗಿರಬಹುದು ಅಥವಾ ಒಳ್ಳೆಯದಾಗಿರಬಹುದು ಸಂಭವಿಸುವ ಮೊದಲೇ ಅದನ್ನು ಸೂಚಿಸುತ್ತದೆ. ಇದು ಶುಭವೇ ಅಥವಾ ಅಶುಭವೇ ಎನ್ನುವ ನಿರ್ಧಾರವನ್ನು ಆಯಾ ವ್ಯಕ್ತಿಗಳ ನಂಬಿಕೆಗೆ ಬಿಟ್ಟಿದ್ದಾಗಿದೆ. ಬೆಕ್ಕಿಗೆ ಸಂಬಂಧಿಸಿದ ಈ ನಂಬಿಕೆಯು ಹಲವೆಡೆ ಅಸ್ಥಿತ್ವದಲ್ಲಿದೆ.