ಬೆಂಗಳೂರು: ಗೃಹಲಕ್ಷ್ಮೀ ಯೋಜನೆ ಸಂಬಂಧ ಡಿಸಿಎಂ ಡಿಕೆ ಶಿವಕುಮಾರ್ ನೇತೃತ್ವದಲ್ಲಿ ಸಭೆ ನಡೆದಿದ್ದು, ಈ ಕುರಿತು ‘ ಸಭೆಯಲ್ಲಿ ಯೋಜನೆ ಸಂಬಂಧ ವಿಸ್ತೃತವಾಗಿ ಚರ್ಚೆ ನಡೆಸಿದ್ದೇವೆ. ಮಹಿಳಾ & ಮಕ್ಕಳ ಕಲ್ಯಾಣ ಇಲಾಖೆ ಸೇರಿ ಕಂದಾಯ, ಗ್ರಾಮೀಣಾಭಿವೃದ್ಧಿ 3 ಇಲಾಖೆ ಸಚಿವರು, ಜೊತೆಗೆ ಅಧಿಕಾರಿಗಳು ಸುದೀರ್ಘವಾಗಿ ಸಭೆ ನಡೆಸಿದ್ದೇವೆ ಎಂದರು. ಇನ್ನು ಬುಧವಾರ ಸಚಿವ ಸಂಪುಟ ಸಭೆಯಲ್ಲಿ ಌಪ್ ಬಗ್ಗೆ ಸಿಎಂಗೆ ತೋರಿಸುತ್ತೇವೆ. ಬಳಿಕ ಗೃಹಲಕ್ಷ್ಮೀ ಯೋಜನೆ ಜಾರಿ ಬಗ್ಗೆ ಸಂಪುಟದಲ್ಲಿ ಚರ್ಚಿಸಿ, ಆಗಸ್ಟ್ 17 ಅಥವಾ 18ರಂದು ‘ಗೃಹಲಕ್ಷ್ಮೀ’ ಜಾರಿ ಮಾಡುತ್ತೇವೆ ಎಂದರು.