Bengaluru Incident: ಬೆಂಗಳೂರಿನಲ್ಲಿ ಹಿಟ್ ಆ್ಯಂಡ್ ರನ್’ಗೆ ಯುವಕ ಬಲಿ..!

ಬೆಂಗಳೂರು ;- ಬೆಂಗಳೂರಿನ ಆರ್​.ಆರ್​​ ನಗರದ ಮೆಟ್ರೋ ನಿಲ್ದಾಣದ ಬಳಿ ಹಿಟ್​​ ಆಯಂಡ್​ ರನ್​ಗೆ ಬೈಕ್ ಸವಾರ ಸಾವನ್ನಪ್ಪಿರುವ ಘಟನೆ ಜರುಗಿದೆ. ಪವನ್​ ಮೃತ ಡೆಲಿವರಿ ಬಾಯ್ ಎಂದು ಗುರುತಿಸಲಾಗಿದೆ. ಆರೋಪಿ ಕಾರು ಚಾಲಕ ವಿನಾಯಕ್​​ ಸೇಲ್ಸ್ ಎಕ್ಸಿಕ್ಯೂಟಿವ್ ಆಗಿ ರಾಜಾಜಿನಗರದ ಮಹೀಂದ್ರ ಶೋ ರೂಂನಲ್ಲಿ ಕೆಲಸ ಮಾಡುತ್ತಿದ್ದಾನೆ. ನಿನ್ನೆ ವೀಕೆಂಡ್ ಹಿನ್ನೆಲೆ ಗೆಳೆಯರ ಜೊತೆ ಪಾರ್ಟಿ ​ಪಾರ್ಟಿ ಮಾಡಿದ್ದಾನೆ.

ಪಾರ್ಟಿ ಬಳಿಕ ಗೆಳೆಯ ಗೆಳೆಯ ಸಾಗರ್​ ಎಂಬವನಿಗೆ ಡ್ರಾಪ್​ ನೀಡಲು ಕಾರಿನಲ್ಲಿ ಮೂವರು ಯುವತಿರು ಓರ್ವ ಯುವಕ ತೆರಳಿದ್ದಾರೆ. ವಿನಾಯಕ್ ಕುಡಿದ ಮತ್ತಿನಲ್ಲೇ ಕಾರು ಚಲಾಯಿಸುತ್ತಿದ್ದು, ತಡರಾತ್ರಿ 1:45ರ ಸುಮಾರಿಗೆ ಆರ್​.ಆರ್​​. ನಗರದ ಮೆಟ್ರೋ ನಿಲ್ದಾಣದ ಬಳಿ ಮುಂದೆ ಹೋಗುತ್ತಿದ್ದ ಜೊಮ್ಯಾಟೊ ಡೆಲಿವರಿ ಬಾಯ್ ಪವನ್ ​ಬೈಕ್​​ಗೆ ಹಿಂದಿನಿಂದ ಗುದ್ದಿದ್ದಾನೆ.

ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ರಕ್ತದ ಮಡುವಿನಲ್ಲಿ ಬಿದ್ದಿದ್ದ ಪವನ್​​​​​ನನ್ನು ಕಾರು 100 ಮೀಟರ್ ಎಳೆದೊಯ್ದಿದೆ. ನಂತರ ಪವನ್​​ ಬಿಟ್ಟು ಕಾರು ಸಮೇತ ಯುವಕ, ಯುವತಿಯರು ಪರಾರಿಯಾಗಲು ಯತ್ನಿಸಿದ್ದಾರೆ. ಇದನ್ನು ಕಂಡ ಸ್ಥಳೀಯರು ಸುಮಾರು 1 ಕಿ.ಮೀ.ವರೆಗೂ ಕಾರನ್ನು ಚೇಸ್​ ಮಾಡಿದ್ದಾರೆ. ನಂತರ ಕಾರನ್ನು ಅಡ್ಡ ಹಾಕಿ ಆರೋಪಿ ಚಾಲಕ ವಿನಾಯಕನನ್ನು ಹಿಡಿದು ಸ್ಥಳೀಯರು ಥಳಿಸಿದ್ದಾರೆ. ಕಾರಿನ ಗ್ಲಾಸ್​ ಹೊಡೆದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ವೇಳೆ ಕಾರಿನಲ್ಲಿದ್ದ ಮೂವರು ಯುವತಿಯರು, ಯುವಕ ಪರಾರಿಯಾಗಿದ್ದಾರೆ. ನಂತರ ಸ್ಥಳೀಯರು ಆರೋಪಿ ವಿನಾಯಕ್​ನನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ.

 

Loading

Leave a Reply

Your email address will not be published. Required fields are marked *