ಬೆಂಗಳೂರು:- ಒತ್ತುವರಿ ತೆರುವುದಾರರಿಗೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಬಿಗ್ ಶಾಕ್ ನೀಡಿದ್ದು, ಮಹಾದೇವಪುರ ಹಾಗೂ ಕೆ ಆರ್ ಪುರಂ ಎರಡು ಕಡೆ ಜೆಸಿಬಿಗಳು ಘರ್ಜಿಸಲಿವೆ. ಪಾಲಿಕೆಯು ಸದ್ಯಕ್ಕೆ ಒಟ್ಟು 571 ಕಡೆ ಬೆಂಗಳೂರಿನಲ್ಲಿ ನಡೆದಿರುವ ಅಕ್ರಮ ಒತ್ತುವರಿಯ ವರದಿ ಸಿದ್ದಪಡಿಸಿದೆ.
ಪಾಲಿಕೆಯ ಎಂಟು ವಲಯಗಳಲ್ಲಿ 571 ಕಡೆ ಒತ್ತುವರಿಯ ಬಗ್ಗೆ ಸರ್ವೆ ವರದಿ ಪಡೆದು ಕಾರ್ಯಚರಣೆ ನಡೆಯಲಿದೆ. ಇಂದಿನಿಂದ ಎರಡು ವಲಯಗಳಲ್ಲಿ ಪಾಲಿಕೆಯಿಂದ ತೆರವು ಕಾರ್ಯಚರಣೆ ನಡೆಯಲಿದೆ. ಮಹಾದೇವಪುರ ಹಾಗೂ ಕೆ ಆರ್ ಪುರಂ ಎರಡು ಕ್ಷೇತ್ರದಲ್ಲಿ ಎರಡು ಕಡೆ ತೆರವು ನಡೆಯಲಿದೆ. ಕೆ.ಆರ್.ಪುರ ವಿಧಾನಸಭಾ ಕ್ಷೇತ್ರದ ಹೊರಮಾವು ವಾರ್ಡ್ನ ಹೊಯ್ಸಳ ನಗರದಲ್ಲಿ ರಾಜಕಾಲುವೆ ಒತ್ತುವರಿ ತೆರವು ನಡೆಯಲಿದೆ. ಹೊಯ್ಸಳ ನಗರದಲ್ಲಿ ರಾಜಕಾಲುವೆ ತೆರವು ಮಾಡಿಕೊಂಡು ಅಂಗಡಿ ಮಳಿಗೆ ನಿರ್ಮಿಸಲಾಗಿದ್ದು ಇಂದು ಅದರ ತೆರವು ಕಾರ್ಯಚರಣೆ ನಡೆಯಲಿದೆ.
ರಾಜಕಾಲುವೆ ಒತ್ತುವರಿ ಎಂದು ಗುರುತಿಸಿ ತೆರವುಗೊಳಿಸುವುದಕ್ಕೆ ತಹಶೀಲ್ದಾರ್ ಆದೇಶ ನೀಡಿದ್ದಾರೆ. ಒತ್ತುವರಿದಾರರಿಗೆ ಬಿಬಿಎಂಪಿ ಅಧಿಕಾರಿಗಳಿಂದ ತೆರವುಗೊಳಿಸುವ ಬಗ್ಗೆ ಮಾಹಿತಿ ನೀಡಿದ್ದು, ಅಗತ್ಯವಿರುವ ವಸ್ತುಗಳನ್ನು ತೆಗೆದುಕೊಳ್ಳುವಂತೆ ಸೂಚನೆ ನೀಡಲಾಗಿದೆ.