WhatsApp ಬಳಕೆದಾರರಿಗೆ ಗುಡ್ ನ್ಯೂಸ್

ನಂಬರ್ ಒನ್ ಮೆಸೇಜಿಂಗ್ ಆಯಪ್ WhatsApp ಅನ್ನು ಇಂದು ಕೇವಲ ಭಾರತದಲ್ಲೇ (India) ಸುಮಾರು 550 ಮಿಲಿಯನ್ ಜನರು ಉಪಯೋಗಿಸುತ್ತಿದ್ದಾರೆ. ಈಗ ಸಂದೇಶಗಳ ಮೂಲಕ ಮಾತುಕತೆ ನಡೆಸಲು ಮಾತ್ರ ಇದನ್ನು ಉಪಯೋಗಿಸುತ್ತಿಲ್ಲ. ಬದಲಾಗಿ ಅನೇಕ ಅಪ್ಡೇಟ್​ಗಳನ್ನು ಪರಿಚಯಿಸಿ ಗ್ರಾಹಕರ ನೆಚ್ಚಿನ ಅಪ್ಲಿಕೇಷನ್ ಆಗಿಬಿಟ್ಟಿದೆ.

ವಾರಕ್ಕೊಂದು ನೂತನ ಫೀಚರ್​ಗಳ ಕುರಿತು ಘೋಷನೆ ಮಾಡುವ ವಾಟ್ಸ್​ಆಯಪ್ ಎರಡು ದಿನಗಳ ಹಿಂದೆಯಷ್ಟೆ ಐಒಎಸ್ ಬಳಕೆದಾರರಿಗೆ ಎಡಿಟ್ ಸೆಂಟ್ ಮೆಸೇಜ್ ಆಯ್ಕೆ ನೀಡಿತ್ತು. ಆಂಡ್ರಾಯ್ಡ್ ನವರಿಗೆ ಹೊಸ ಕ್ರಾಪ್‌ ಟೂಲ್ ಎಂಬ ಫೀಚರ್ (New Feature) ಪರಿಚಯಿಸುವುದಾಗಿ ಹೇಳಿತ್ತು. ಇದೀಗ ಬಳಕೆದಾರರಿಗೆ ಖುಷಿ ನೀಡಲು ಮತ್ತೊಂದು ಅಪ್ಡೇಟ್ ನೀಡುತ್ತಿದೆ.

ವಾಟ್ಸ್​ಆಯಪ್ ಆಂಡ್ರಾಯ್ಡ್‌ನಲ್ಲಿ ಕೆಲ ಬೀಟಾ ಪರೀಕ್ಷಕರಿಗೆ ಮರುವಿನ್ಯಾಸಗೊಳಿಸಲಾದ ಎಮೋಜಿ ಕೀಬೋರ್ಡ್ ಅನ್ನು ಹೊರತರುತ್ತಿದೆ. ಈ ಮರುವಿನ್ಯಾಸಗೊಳಿಸಲಾದ ಎಮೋಜಿ ಕೀಬೋರ್ಡ್​ನಲ್ಲಿ ಸ್ಕ್ರಾಲ್ ಮಾಡುವ ಮೂಲಕ ಅನೇಕ ಆಯ್ಕೆ ಪಡೆಯಬಹುದು ಎಂದು WABetaInfo ವರದಿ ಮಾಡಿದೆ. ಜೊತೆಗೆ GIF, ಸ್ಟಿಕ್ಕರ್ ಮತ್ತು ಅವತಾರ್ ಎಂಬ ಕಾಲಮ್​ಗಳನ್ನು ಮೇಲ್ಭಾಗದಲ್ಲಿ ನೀಡಲಾಗಿದೆ. ಮರುವಿನ್ಯಾಸಗೊಳಿಸಲಾದ ಕೀಬೋರ್ಡ್ ಪ್ರಸ್ತುತ ಕೆಲವು ಬೀಟಾ ಪರೀಕ್ಷಕರಿಗೆ ಲಭ್ಯವಿದೆ. ಇದು ಕೆಲವೇ ವಾರಗಳಲ್ಲಿ ಎಲ್ಲ ಬಳಕೆದಾರರಿಗೆ ಸಿಗುವ ನಿರೀಕ್ಷೆಯಿದೆ ಎಂದು ವರದಿ ಹೇಳಿದೆ.

ವಾಟ್ಸ್​ಆಯಪ್ ಇದೀಗ ಹೊಸ ಕ್ರಾಪ್‌ ಟೂಲ್ ಎಂಬ ಆಯ್ಕೆ ನೀಡಲು ಮುಂದಾಗಿದೆ. ವಾಟ್ಸ್​ಆಯಪ್ ವಿಂಡೋಸ್‌ ಬಿಟಾದಲ್ಲಿ ಡ್ರಾಯಿಂಗ್‌ ಎಡಿಟರ್‌ಗಾಗಿ ಹೊಸ ಕ್ರಾಪ್‌ ಟೂಲ್ ತಯಾರಾಗುತ್ತಿದೆ. ಈ ಟೂಲ್‌ನಿಂದಾಗಿ ಬಳಕೆದಾರರು ವಾಟ್ಸ್​ಆಯಪ್​ನಲ್ಲಿ ಇಮೇಜ್‌ಗಳನ್ನು ಕ್ರಾಪ್‌ ಮಾಡಬಹುದು. ಜೊತೆಗೆ ಇಮೇಜ್‌ಗಳನ್ನು ಎಡಿಟ್‌ ಮಾಡಲು ಸಾದ್ಯವಾಗಲಿದೆ. ಈ ಹಿಂದೆ ಬಳಕೆದಾರರು ತಮ್ಮ ಫೋಟೋಗಳನ್ನು ಶೇರ್‌ ಮಾಡುವ ಮೊದಲು ಕ್ರಾಪ್‌ ಮಾಡಬೇಕಾದರೆ ಬಾಹ್ಯ ಇಮೇಜ್ ಎಡಿಟಿಂಗ್ ಟೂಲ್‌ಗಳನ್ನು ಬಳಸಬೇಕಿತ್ತು. ಆದರೆ ಈ ಹೊಸ ಆಯ್ಕೆಯು ನಿಮಗೆ ಅಪ್ಲಿಕೇಶನ್‌ನಲ್ಲಿಯೇ ಇಮೇಜ್‌ ಕ್ರಾಪ್‌ ಮಾಡಲು ಅವಕಾಶ ನೀಡಲಿದೆ.

ಸದ್ಯ ವಾಟ್ಸ್​ಆಯಪ್ ಡ್ರಾಯಿಂಗ್ ಎಡಿಟರ್‌ಗಾಗಿ ಕ್ರಾಪ್ ಟೂಲ್ ಕೆಲವೇ ಕೆಲ ಬೀಟಾ ಪರೀಕ್ಷಕರಿಗೆ ಮಾತ್ರ ಲಭ್ಯವಿದೆ. ಇದು ಎಲ್ಲಾ ರೀತಿಯ ಪರೀಕ್ಷೆಗಳ ನಂತರ ಎಲ್ಲ ಬಳಕೆದಾರರಿಗೆ ಲಭ್ಯವಾಗಲಿದೆಯಂತೆ.

Loading

Leave a Reply

Your email address will not be published. Required fields are marked *