ಲೇಡಿ ಸೂಪರ್ ಸ್ಟಾರ್ ಗೆ ಜೋಡಿಯಾದ ನಟ ಜಯಂರವಿ

ಮಿಳು ಚಿತ್ರರಂಗದ ಲೇಡಿ ಸೂಪರ್ ಸ್ಟಾರ್ ನಟಿ ನಯನತಾರಾ ಮಕ್ಕಳು ಹಾಗೂ ಸಿನಿಮಾಗಳ ಕೆಲಸಗಳಲ್ಲಿ ಬ್ಯುಸಿಯಾಗಿದ್ದಾರೆ. ಶಾರುಖ್ ಖಾನ್ ನಟನೆಯ ಸಿನಿಮಾದ ಮೂಲಕ ಬಾಲಿವುಡ್ ಚಿತ್ರರಂಗಕ್ಕೆ ಎಂಟ್ರಿಕೊಟ್ಟಿರುವ ನಟಿ ಇದೀಗ ಜಯಂರವಿಗೆ ಜೋಡಿಯಾಗಿದ್ದಾರೆ.

ಮಿಳಿನ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿರುವ ಜಯಂರವಿ ಇತ್ತೀಚಿಗೆ ‘ಪೊನ್ನಿಯಿನ್ ಸೆಲ್ವನ್ 2’ ಚಿತ್ರದ ಸಕ್ಸಸ್ ನಂತರ ಮತ್ತೊಂದು ಸಿನಿಮಾದಲ್ಲಿ ನಟಿಸಿದ್ದಾರೆ. ಚಿತ್ರಕ್ಕೆ ‘ಇರೈವನ್’ ಎಂದು ಹೆಸರಿಡಲಾಗಿದ್ದು, ಈ ಸಿನಿಮಾದಲ್ಲಿ ನಟಿ ನಯನತಾರಾಗೆ ಜೋಡಿಯಾಗಿ ಜಯಂರವಿ ಬಣ್ಣ ಹಚ್ಚಿದ್ದಾರೆ.

‘ಪೊನ್ನಿಯಿನ್ ಸೆಲ್ವನ್ 2’ ಸಿನಿಮಾದ ಸಕ್ಸಸ್ ಬಳಿಕ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಹೊರಹೊಮ್ಮಿರುವ ತಮಿಳು ನಟ ಜಯಂರವಿಗೆ ಸಾಕಷ್ಟು ಡಿಮ್ಯಾಂಡ್ ಕ್ರಿಯೇಟ್ ಆಗಿದೆ. ಇದೀಗ ಮತ್ತೊಂದು ಪ್ಯಾನ್ ಇಂಡಿಯಾ ಪ್ರಾಜೆಕ್ಟ್‌ಗೆ ನಟ ಜಯಂರವಿ ಓಕೆ ಎಂದಿದ್ದಾರೆ. ಕನ್ನಡ, ತಮಿಳು, ತೆಲುಗು, ಮಲಯಾಳಂ ಭಾಷೆಯಲ್ಲಿ ‘ಇರೈವನ್’ ಎಂಬ ಟೈಟಲ್‌ನಲ್ಲಿ ಮೂಡಿ ಬರುತ್ತಿರುವ ಹೊಸ ಸಿನಿಮಾದಲ್ಲಿ ಜಯಂರವಿಗೆ ನಾಯಕಿಯಾಗಿ ನಯನತಾರಾ ಸಾಥ್ ನೀಡ್ತಿದ್ದಾರೆ.

ಈ ಸಿನಿಮಾಗೆ ಐ.ಅಹಮದ್ ಆಕ್ಷನ್ ಕಟ್ ಹೇಳಿದ್ದು, ಶೂಟಿಂಗ್ ಮುಗಿಸಿ ಪೋಸ್ಟ್ ಪ್ರೊಡಕ್ಷನ್ ಕೊನೆ ಹಂತದಲ್ಲಿರುವ ‘ಇರೈವನ್’ ಸಿನಿಮಾದ ರಿಲೀಸ್ ಡೇಟ್ ಕೂಡ ಅನೌನ್ಸ್ ಆಗಿದೆ. ಮುಂದಿನ ವರ್ಷದ ಆಗಸ್ಟ್ 25ಕ್ಕೆ ವರ್ಲ್ಡ್ ವೈಡ್ ಈ ಚಿತ್ರ ತೆರೆಕಾಣಲಿದೆ. ಆಕ್ಷನ್ ಥ್ರಿಲ್ಲರ್ ಇರೈವನ್‌ನಲ್ಲಿ ರಾಹುಲ್ ಬೋಸೆ, ಅಶಿಶ್ ವಿದ್ಯಾರ್ಥಿ, ನರೇನ್, ವಿಜಯಲಕ್ಷ್ಮೀ, ಚಾರ್ಲಿ, ಬಗ್ಸ್ ಸೇರಿದಂತೆ ಹಲವರು ನಟಿಸಿದ್ದಾರೆ.

2015ರಲ್ಲಿ ತೆರೆಕಂಡ ‘ತಾನಿ ಓರುವನ್’ ಎಂಬ ಚಿತ್ರದಲ್ಲಿ ಜಯಂರವಿ- ನಯನತಾರಾ ಜೊತೆಯಾಗಿ ನಟಿಸಿದ್ದರು. ಇದೀಗ 8 ವರ್ಷಗಳ ಬಳಿಕ ಈ ಜೋಡಿ ಒಂದಾಗಿದ್ದು ಸಾಕಷ್ಟು ನಿರೀಕ್ಷೆ ಮೂಡಿಸಿದೆ.

Loading

Leave a Reply

Your email address will not be published. Required fields are marked *