ಬಿಗ್ ಬಾಸ್ ಮೂಲಕ ಖ್ಯಾತಿ ಘಳಿಸಿದ ನಟ ಪ್ರಥಮ್ ಇದೀಗ ತಮ್ಮ ಅಭಿಮಾನಿಗಳಿಗೆ ಗುಡ್ ನ್ಯೂಸ್ ನೀಡಿದ್ದಾರೆ. ಸದ್ದಿಲ್ಲದೆ ನಟಭಯಂಕರ ಪ್ರಥಮ್ ಎಂಗೇಜ್ಮೆಂಟ್ ಮಾಡಿಕೊಂಡಿದ್ದು ಈ ಕುರಿತು ನಟ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ. ಸದ್ಯ ಈ ಪೋಸ್ಟ್ ಎಲ್ಲೆಡೆ ವೈರಲ್ ಆಗಿದೆ.
ಸದ್ದಿಲ್ಲದೆ ಒಳ್ಳೆಯ ಹುಡುಗ ನಟ ಪ್ರಥಮ್ ಎಂಗೇಜ್ ಮೆಂಟ್ ಮಡಿಕೊಂಡಿದ್ದಾರೆ. ತನ್ನ ಕುಟುಂಬದವರು ನೋಡಿದ ಹುಡುಗಿ ಜೊತೆ ಅರೆಂಜ್ ಮ್ಯಾರೇಜ್ ಆಗಲು ರೆಡಿಯಾಗಿದ್ದು ಈ ಹಿನ್ನೆಲೆಯಲ್ಲಿ ಸಿಂಪಲ್ ಆಗಿ ಉಂಗುರ ಬದಲಾಯಿಸಿಕೊಂಡಿದ್ದಾರೆ. ನಿಶ್ಚಿತಾರ್ಥ ನೆರವೇರಿರುವ ಬಗ್ಗೆ ಭಾವಿ ಪತ್ನಿಯ ಬೆರಳಿಗೆ ಉಂಗುರ ತೊಡಿಸಿರುವ ಫೋಟೋವನ್ನ ನಟ ಶೇರ್ ಮಾಡಿದ್ದಾರೆ. ಭಾವಿ ಪತ್ನಿಯ ಮುಖ ಆಗಲಿ, ಹೆಚ್ಚಿನ ವಿವರ ಆಗಲಿ ಯಾವುದನ್ನು ಪ್ರಥಮ್ ಹಂಚಿಕೊಂಡಿಲ್ಲ.
ಒಂದು ಸುಂದರ ಕ್ಷಣ. ಇವತ್ತು ನನ್ನ ಎಂಗೇಜ್ಮೆಂಟ್ ಆಯ್ತು. ಯಾವ ಆಡಂಬರ, ಸಂಭ್ರಮ, ತೋರ್ಪಡಿಕೆ ಇಲ್ಲದೆ ಬಹಳ ಸರಳವಾಗಿ ಕುಟುಂಬದವರು ಮೆಚ್ಚಿದವರ ಜೊತೆಯಾದೆ. ನಾನು ತುಂಬಾ ಸರಳವಾಗಿಯೇ ಬದುಕಿದವನು,ಹಾಗೇ ಇರೋಕೆ ಇಷ್ಟ. ನನ್ನ ಎಂಗೇಜ್ಮೆಂಟ್ ದೇಶದ ದೊಡ್ಡ ಸುದ್ಧಿಯಲ್ಲ. ಆದರೆ ನನ್ನ ಇಷ್ಟಪಡುವ ಸ್ಬೇಹಿತರು ಆತ್ಮೀಯರಿಗೆ ವಿಚಾರ ಹಂಚಿಕೊಳ್ಳೋಣ ಅನ್ನೋ ಕಾರಣಕ್ಕೆ ನಿಮ್ಗೆ ತಿಳಿಸಿದ್ದೇನೆ ಅಷ್ಟೇ. ಮದುವೆ ಎಷ್ಟು ಅದ್ಧೂರಿಯಾಗಿ ಆದೆ ಅನ್ನೋದಕ್ಕಿಂತ ಎಷ್ಟು ಚೆನ್ನಾಗಿ ಬದುಕು ಕಟ್ಟಿಕೊಂಡ್ವಿ ಅನ್ನೋದೇ ನಿಜವಾದ ಸಾಧನೆ. ನನಗೆ ಹಾಗಿರೋಕೆ ಇಷ್ಟ. ಹೀಗೇ ಇದ್ದು ಬಿಡ್ತೀನಿ. ಹರಸುವವರು ಅಲ್ಲಿಂದಲೇ ಹರಸಿ., ಅದೇ ಆಶೀರ್ವಾದ ಎಂದು ಪ್ರಥಮ್ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ಪ್ರಥಮ್ ಗೆ ಸಾಕಷ್ಟು ಮಂದಿ ಶುಭ ಹಾರೈಸಿದ್ದಾರೆ