ರೋಮ್: ಇಟಲಿಯ ಮಾಜಿ ಪ್ರಧಾನಿ ಸಿಲ್ವಿಯೊ ಬೆರ್ಲುಸ್ಕೋನಿ ಅವರು ನಿಧನರಾಗಿದ್ದಾರೆ. ಅವರಿಗೆ 86 ವರ್ಷ ವಯಸ್ಸಾಗಿದ್ದು ಮಿಲನ್ನ ಸ್ಯಾನ್ ರಫೇಲ್ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ ಎಂದು ಇಟಲಿ ಮಾಧ್ಯಮಗಳು ವರದಿ ಮಾಡಿವೆ.
ಲ್ಯುಕೇಮಿಯ ಕಾಯಿಲೆಯಿಂದ ಬಳಲುತ್ತಿದ್ದ ಸಿಲ್ವಿಯ ಬರ್ಲುಸ್ಕೋನಿ ಶ್ವಾಸಕೋಶದ ಸೋಂಕಿಗೆ ಎಪ್ರಿಲ್ ತಿಂಗಳಲ್ಲಿ ಚಿಕಿತ್ಸೆಗೊಳಗಾಗಿದ್ದರು.
ಇದೀಗ ಮತ್ತೆ ಆರೋಗ್ಯ ಉಲ್ಬಣಿಸಿದ ಕಾರಣದಿಂದಾಗಿ ಆಸ್ಪತ್ರೆಗೆ ದಾಖಲಾಗಿದ್ದು ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ.
1994ರಲ್ಲಿ ಪ್ರಧಾನಿ ಹುದ್ದೆಗೇರಿದ್ದ ಸಿಲ್ವಿಯ ಬರ್ಲುಸ್ಕೋನಿ, 2011ರವರೆಗೆ ಅಧಿಕಾರದಲ್ಲಿದ್ದರು.
ಕೋಟ್ಯಧಿಪತಿ ಮಾಧ್ಯಮ ಒಡೆಯರಾಗಿದ್ದ ಬರ್ಲುಸ್ಕೋನಿ ನೇತೃತ್ವದ ಮಧ್ಯ-ಬಲಪಂಥೀಯ ಫೋರ್ಝಾ ಇಟಾಲಿಯ ಪಕ್ಷವು ಕಳೆದ ಸೆಪ್ಟೆಂಬರ್ ತಿಂಗಳಲ್ಲಿ ನಡೆದಿದ್ದ ಚುನಾವಣೆಯ ನಂತರ ಪ್ರಧಾನಿ ಜಾರ್ಜಿಯಾ ಮೆಲೋನಿಯೊಂದಿಗೆ ಮೈತ್ರಿ ಮಾಡಿಕೊಂಡಿತ್ತು. ಈ ಚುನಾವಣೆಯಲ್ಲಿ ಸ್ವತಃ ಬರ್ಲುಸ್ಕೋನಿ ಇಟಲಿ ಸಂಸತ್ತಿನ ಮೇಲ್ಮನೆಯಾದ ಸೆನೆಟ್ಗೆ ಚುನಾಯಿತರಾಗಿದ್ದರು.