ಪತ್ನಿ ಮೇಲಿನ ಕೋಪಕ್ಕೆ ತನ್ನ 5 ವರ್ಷದ ಮಗು ಕೊಂದ ಪಾಪಿ ತಂದೆ

ಘಾತಕಾರಿ ಘಟನೆಯೊಂದರಲ್ಲಿ ವ್ಯಕ್ತಿಯೊಬ್ಬ ತನ್ನ ಐದು ವರ್ಷದ ಮಗನನ್ನು ಹೆಂಡ್ತಿ ಮೇಲಿನ ಸೇಡಿಗಾಗಿ ಕೊಲೆ ಮಾಡಿರೋದು ಒಡಿಶಾದ ಉದಿತ್‌ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಆರೋಪಿ ರಾಜೇಶ್ ಲಾಕ್ರಾ (26) ತನ್ನ ಪತ್ನಿಯ ಶೀಲದ ಬಗ್ಗೆ ಅನುಮಾನಿಸುತ್ತಿದ್ದು, ಆಕೆಯೇ ಕೊಲೆ ಮಾಡಿದ್ದಾಳೆಂದು ಬಿಂಬಿಸಲು ಮಗುವನ್ನ ಸಾಯಿಸಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

 

ಶನಿವಾರ ಬೆಳಗ್ಗೆ ಆರೋಪಿಯು ತನ್ನ ಪತ್ನಿ ಗುಣು ಲಾಕ್ರಾ (24) ತನ್ನ ಮಗ ಆರ್ಯನ್‌ನನ್ನು ಕೊಂದಿದ್ದಾಳೆ ಎಂದು ನೆರೆಹೊರೆಯವರಿಗೆ ಸುಳ್ಳು ಹೇಳಲು ಯತ್ನಿಸಿದ ನಂತರ ಘಟನೆ ಬೆಳಕಿಗೆ ಬಂದಿದೆ.

ಪ್ರಾಥಮಿಕ ತನಿಖೆಯ ನಂತರ ಪೊಲೀಸರು ಕೊಲೆ ಆರೋಪದ ಮೇಲೆ ರಾಜೇಶ್ ಲಾಕ್ರಾನನ್ನು ಕಸ್ಟಡಿಗೆ ತೆಗೆದುಕೊಂಡು ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದರು.

ರಾಜೇಶ್ ಮತ್ತು ಗುಣು ಪ್ರೀತಿಸಿ ಏಳು ವರ್ಷಗಳ ಹಿಂದೆ ಮದುವೆಯಾಗಿದ್ದರು. ಅವರಿಬ್ಬರೂ ದಿನಗೂಲಿ ಕೆಲಸ ಮಾಡುತ್ತಿದ್ದರು. ಕ್ರಮೇಣ ಹೆಂಡತಿ ಜೀವನೋಪಾಯಕ್ಕೆಂದು ದೀರ್ಘ ಗಂಟೆಗಳ ಕಾಲ ಹೊರಗೆ ಹೋಗುತ್ತಿದ್ದರಿಂದ ಅವಳನ್ನು ಗಂಡ ಅನುಮಾನಿಸುತ್ತಿದ್ದ. ಇದು ದಂಪತಿಗಳ ನಡುವೆ ಆಗಾಗ್ಗೆ ಜಗಳಕ್ಕೆ ಕಾರಣವಾಗುತ್ತಿತ್ತು.

ಶುಕ್ರವಾರ ರಾತ್ರಿ ಗುಣು ಮನೆಗೆ ಬಾರದೆ ಇದ್ದಾಗ, ರಾಜೇಶ್ ಕೋಪದ ಭರದಲ್ಲಿ ಮಗುವನ್ನು ಸ್ಕಾರ್ಫ್ ನಿಂದ ಕತ್ತು ಹಿಸುಕಿ ನೇಣು ಹಾಕಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ. ರಾಜೇಶ್ ನೆರೆಹೊರೆಯವರಿಗೆ ತನ್ನ ಮಗನನ್ನು ತನ್ನ ಹೆಂಡತಿ ಮತ್ತು ಅವಳ ಸಂಗಾತಿ ಕೊಂದಿದ್ದಾರೆ ಎಂದು ಬಿಂಬಿಸಲು ಪ್ರಯತ್ನಿಸಿದ. ಆದರೆ ಅವರು ಆತನನ್ನು ನಂಬದೇ ಪೊಲೀಸರಿಗೆ ಒಪ್ಪಿಸಿದ್ದಾರೆ.

ತನ್ನ ಪತ್ನಿ ಮತ್ತೊಬ್ಬ ವ್ಯಕ್ತಿಯೊಂದಿಗೆ ದ್ವಿಚಕ್ರ ವಾಹನದಲ್ಲಿ ಹೋಗುತ್ತಿರುವುದನ್ನು ತಾನು ನೋಡಿದ್ದೇನೆ ಮತ್ತು ಆಕೆ ಉದ್ದೇಶಪೂರ್ವಕವಾಗಿ ತನ್ನ ಕರೆಯನ್ನು ನಿರ್ಲಕ್ಷಿಸಿ ಶುಕ್ರವಾರ ರಾತ್ರಿ ಮನೆಗೆ ಹಿಂತಿರುಗಲಿಲ್ಲ ಎಂದು ರಾಜೇಶ್ ಲಾಕ್ರಾ ಅವರು ಅಪರಾಧವನ್ನು ಒಪ್ಪಿಕೊಂಡು ತನಿಖಾಧಿಕಾರಿಗೆ ತಿಳಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಅವನು ತನ್ನ ಹೆಂಡತಿಯ ಮೇಲೆ ಸೇಡು ತೀರಿಸಿಕೊಳ್ಳಲು ಅಸಹನೆಯಿಂದ ಕಾಯುತ್ತಿದ್ದನು. ಪತ್ನಿ ಹಿಂತಿರುಗದಿದ್ದಾಗ ಅವನ ಕೋಪವು ಮಗುವಿನ ಕಡೆಗೆ ತಿರುಗಿತು ಎಂದು ಪೊಲೀಸರು ಹೇಳಿದರು. ಪತ್ನಿ ದೂರಿನ ಮೇರೆಗೆ ಆರೋಪಿಯನ್ನು ಬಂಧಿಸಲಾಗಿದೆ.

Loading

Leave a Reply

Your email address will not be published. Required fields are marked *