ನಾಳೆಯಿಂದ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ

ಬೆಂಗಳೂರು: ಕಾಂಗ್ರೆಸ್ ಸರ್ಕಾರ ಘೋಷಿಸಿರುವ 5 ಉಚಿತ ಯೋಜನೆಗಳ ಪೈಕಿ ನಾಳೆ ಮೊದಲ ಯೋಜನೆ ಜಾರಿಯಾಗ್ತಿದೆ. ಮಹಿಳೆಯರ ಉಚಿತ ಬಸ್ ಪ್ರಯಾಣದ ಸ್ತ್ರೀ ಶಕ್ತಿ ಯೋಜನೆಗೆ ಸಿಎಂ, ಡಿಸಿಎಂ ಚಾಲನೆ ಕೊಡ್ತಿದ್ದಾರೆ. ವಿಧಾನಸೌಧದ ಗ್ರಾಂಡ್ ಸ್ಟೆಪ್ಸ್ ಮೇಲೆ ಅದ್ದೂರಿ ಕಾರ್ಯಕ್ರಮ ನಡೆಯಲಿದ್ದು ಶಕ್ತಿಸೌಧ ಮದುವಣಗಿತ್ತಿಯಂತೆ ಸಿಂಗಾರಗೊಂಡಿದೆ, ಸಿಎಂ ನಾಳೆ ಕಂಡಕ್ಟರ್ ರಾಮಯ್ಯ ಆಗಲಿದ್ದು ನಾರಮಣಿಯರಿಗೆ ಟಿಕೆಟ್ ಕೊಡಲಿದ್ದಾರೆ.

 

ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ್ಮೇಲೆ ತಾವು ಕೊಟ್ಟ 5 ಉಚಿತ ಯೋಜನೆಗಳನ್ನ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಘೋಷಿಸಲಾಗಿದೆ. ಈಗಾಗ್ಲೆ ಕ್ಯಾಬಿನೆಟ್ ಸಭೆಯಲ್ಲಿ ಚರ್ಚಿಸಿ ತೀರ್ಮಾನ ಮಾಡಿ ಅಧಿಕಾರಿಗಳೊಂದಿಗೆ ಚರ್ಚಿಸಿ ಆರ್ಥಿಕತೆಯ ಕ್ರೂಡೀಕರಣದ ಪ್ಲಾನ್ ಮೇಲೆ ಉಚಿತ ಯೋಜನೆಗಳನ್ನ ಹಂತ – ಹಂತವಾಗಿ ಜಾರಿಗೆ ತರಲು ಸರ್ಕಾರ ಪ್ಲಾನ್ ಮಾಡಿದೆ. ಈ 5 ಉಚಿತ ಯೋಜನೆಗಳ ಪೈಕಿ ಮೊದಲ ಯೋಜನೆ ನಾಳೆ ಜಾರಿಯಾಗ್ತಿದೆ, ಮಹಿಳೆಯರ ಉಚಿತ ಬಸ್ ಪ್ರಯಾಣದ ಸ್ತ್ರೀ ಶಕ್ತಿ ಯೋಜನೆಗೆ ವಿಧಾನಸೌಧದ ಪೂರ್ವ ದ್ವಾರದ ಗ್ರಾಂಡ್ ಸ್ಟೆಪ್ಸ್ ಮೇಲೆ ಅದ್ದೂರಿ ಚಾಲನೆ ಸಿಗಲಿದೆ.

ವಿಧಾನಸೌಧದ ಪೂರ್ವ ದ್ವಾರದ ಮೆಟ್ಟಿಲುಗಳ ಮೇಲೆ ಅದ್ದೂರಿ ಸ್ಟೇಜ್ ಹಾಕಲಾಗಿದ್ದು, ಶಕ್ತಿಸೌಧ ಮದುವಣಗಿತ್ತಿಯಂತೆ ಕಂಗೊಳಿಸುತ್ತಿದೆ. ಸರ್ಕಾರದ ಮೊದಲ ಸರ್ಕಾರಿ ಕಾರ್ಯಕ್ರಮ ಇದಾಗಿದ್ದು ಇದನ್ನ ಐತಿಹಾಸಿಕವಾಗಿಸಲು ಸಿದ್ದು ಟೀಂ ರೆಡಿಯಾಗಿದೆ. ನಾಳೆ ಬೆಳಿಗ್ಗೆ 11 ಗಂಟೆಗೆ ವೇದಿಕೆಯ ಮೇಲೆ ನಿಂತು ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್, ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಸ್ತ್ರೀ ಶಕ್ತಿ ಯೋಜನೆಗೆ ಚಾಲನೆ ಕೊಡಲಿದ್ದಾರೆ. ಯೋಜನೆ ಉದ್ಘಾಟಿಸಿ ವಿಧಾನಸೌಧದಿಂದ ಬಸ್ ನಲ್ಲಿ ತೆರಳುವ ಸಿಎಂ ಸಿದ್ದರಾಮಯ್ಯ ಮೆಜೆಸ್ಟಿಕ್ ಗೆ ಬಂದು KSRTC, BMTC ಬಸ್ ಗಳಲ್ಲಿ ಕಂಡಕ್ಟರ್ ಆಗಿ ಸಾಂಕೇತಿಕವಾಗಿ ಮಹಿಳೆಯರಿಗೆ ಟಿಕೆಟ್ ವಿತರಣೆ ಮಾಡಲಿದ್ದಾರೆ.

ರಾಜ್ಯದ ಎಲ್ಲಾ ಭಾಗಗಳಲ್ಲಿ ನಾಳೆ ಏಕಕಾಲಕ್ಕೆ ಉಚಿತ ಬಸ್ ಪ್ರಯಾಣಕ್ಕೆ ಚಾಲನೆ ಸಿಗುತ್ತದೆ. ಜಿಲ್ಲೆಗಳಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು, ಸಾರಿಗೆ ಅಧಿಕಾರಿಗಳು ಚಾಲನೆ ಕೊಡ್ತಾರೆ, ಆಧಾರ್ ಕಾರ್ಡ್, ಪಾನ್ ಕಾರ್ಡ್, ಓಟರ್ ಐಡಿ ಸೇರಿದಂತೆ ರಾಜ್ಯದಲ್ಲಿ ವಾಸವಿರುವ

ಯಾವುದಾದ್ರು ಒಂದು ದಾಖಲೆ ತೋರಿಸಿ ನಾಳೆಯಿಂದ ಬಸ್ ನಲ್ಲಿ ಪ್ರಯಾಣ ಮಾಡಬಹುದು. 3 ತಿಂಗಳ ಒಳಗಾಗಿ ಸ್ಮಾರ್ಟ್ ಕಾರ್ಡ್ ಪಡೆಯಬೇಕು, ಬಸ್ ನಲ್ಲಿ ಪ್ರಯಾಣಿಸುವಾಗ ಟಿಕೆಟ್ ಕೊಡ್ತೇವೆ, ಅದರಲ್ಲಿ ದರವೂ ಇರುತ್ತೆ. ಅದ್ರಿಂದ ಸರ್ಕಾರಕ್ಕೆ ಎಷ್ಟು ಜನ ಪ್ರಯಾಣ ಮಾಡಿದ್ದಾರೆ ಎಂಬ ಮಾಹಿತಿ ಸಿಗುತ್ತೆ,

50% ಬಸ್ ನಲ್ಲಿ ಮಹಿಳೆಯರಿಗೆ ರಿಸರ್ವೇಶನ್ ಮಾಡಲಾಗಿದೆ. ಮಹಿಳೆಯರ ಉಚಿತ ಪ್ರಯಾಣದ ಬಸ್ ಗಳಿಗೆ ಸ್ಟಿಕ್ಕರಿಂಗ್ ಹಾಕಲಾಗುತ್ತೆ.

ಬಸ್ ಸ್ಟಾಪ್ ಇರೋ ಕಡೆ ಬಸ್ ನಿಲ್ಲಿಸಲೇಬೇಕು, ಬಸ್ ನಿಲ್ಲಿಸದಿದ್ದರೆ ಡ್ರೈವರ್ , ಕಂಡಕ್ಟರ್ ಮೇಲೆ ಕಟ್ಟು ನಿಟ್ಟಿನ ಕ್ರಮ ಕೈಗೊಳ್ತೇವೆ. ಬಸ್ ನಿಗಮಗಳಿಗೆ ಸರ್ಕಾರ ಹಣ ಕೊಡುತ್ತೆ ಇಲಾಖೆಗೆ ಯಾವುದೇ ನಷ್ಟವಾಗಲ್ಲ ಎಂದ್ರು ಸಚಿವರು.

Loading

Leave a Reply

Your email address will not be published. Required fields are marked *