14 ಪರ್ವತಗಳನ್ನು ಏರುವ ಗುರಿ ಹಾಕಿಕೊಂಡ ನಾರ್ವೆಯ ಪರ್ವತಾರೋಹಿ

ಠ್ಮಂಡು: ವೇಗದ ಪರ್ವತಾರೋಹಿ ಎಂದೇ ಖ್ಯಾತಿ ಘಳಿಸಿರುವ ನಾರ್ವೆಯ ಕ್ರಿಸ್ಟಿನ್‌ ಹರಿಲಾ ವಿಶ್ವದ ಅತಿ ಎತ್ತರದ 14 ಪರ್ವತಗಳನ್ನು ಕೇವಲ ಮೂರು ತಿಂಗಳಲ್ಲಿ ಏರುವ ಗುರಿಯನ್ನು ಹಾಕಿಕೊಂಡಿದ್ದಾರೆ.

37ರ ಹರೆಯದ ಕ್ರಿಸ್ಟಿನ್ ಹರಿಲಾ ಮಂಗಳವಾರ ಹಿಮಾಲಯ ಪರ್ವತಗಳಿಂದ ನೇಪಾಳದ ರಾಜಧಾನಿಗೆ ವಾಪಸ್ ಆಗಿದ್ದಾರೆ.

ಮೂರು ತಿಂಗಳಲ್ಲಿ 14 ಶಿಖರಗಳನ್ನು ಏರುವ ಹೊಸ ಗುರಿಯನ್ನು ಅವರು ಹೊಂದಿದ್ದಾರೆ. ಈಗಾಗಲೇ 40 ದಿನಗಳಲ್ಲಿ ಎಂಟು ಶಿಖರಗಳನ್ನು ಏರಿರುವುದಾಗಿ ತಿಳಿಸಿರುವ ಅವರು, ಈ ಗುರಿಗೆ ಪ್ರಾರಂಭದಲ್ಲಿ ಯೋಜಿಸಿದ್ದ ಅವಧಿಗಿಂತಲೂ ಮೊದಲೇ ಸಾಧಿಸುವುದಾಗಿಯೂ ಹೇಳಿದ್ದಾರೆ.

ನೇಪಾಳ ಮೂಲದ ಬ್ರಿಟಿಷ್‌ ಪ್ರಜೆ ನಿರ್ಮಲ್‌ ಪುರ್ಜಾ 2019ರಲ್ಲಿ ನಿರ್ಮಿಸಿದ ದಾಖಲೆಯನ್ನು ಮುರಿಯಲು ಹರಿಲಾ ಮುಂದಾಗಿದ್ದಾರೆ.

Loading

Leave a Reply

Your email address will not be published. Required fields are marked *