ವಾಷಿಂಗ್ಟನ್: ತೈವಾನ್ ವಿಚಾರವಾಗಿ ಈಗಾಗಲೇ ಜಿದ್ದಾಜಿದ್ದಿಗೆ ಬಿದ್ದಿರುವ ಅಮೆರಿಕ-ಚೀನದ ನಡುವಿನ ಮುಸುಕಿನ ಗುದ್ದಾಟ ಮುಂದುವರಿದಿದೆ. ಇದೀಗ ತೈವಾನ್ ಜಲಸಂಧಿಯಲ್ಲಿ ಅಮೆರಿಕ ನೌಕೆಗೆ ಅಡ್ಡಿಪಡಿಸಲು ಯತ್ನಿಸಿದ ಚೀನಾ ನೌಕೆಯ ಉದ್ಧಟತನದ ವೀಡಿಯೊವನ್ನು ಸೋಮವಾರ ಅಮೆರಿಕ ಬಿಡುಗಡೆಗೊಳಿಸಿದ್ದು, ಚೀನದ ವಿರುದ್ಧ ಆಕ್ರೊಶ ವ್ಯಕ್ತಪಡಿಸಿದ್ದಾರೆ.
ಅಲ್ಲದೇ ಇಂಥ ಮನಸ್ಥಿತಿ ಅಸುರಕ್ಷಿತ ಎಂದಿದೆ. ತೈವಾನ್ ಜಲಸಂ ಧಿಯಲ್ಲಿ ಶನಿವಾರ ಕೆನಡಾದ ನೌಕೆ ಹಾಗೂ ಅಮೆರಿಕದ ವಿಧ್ವಂಸಕ ನೌಕೆ ಯುಎಸ್ಎಸ್ ಚುಂಗ್-ಹೂನ್ ಸಾಗುತ್ತಿದ್ದವು. ಈ ವೇಳೆ ಅದೇ ಮಾರ್ಗದಲ್ಲಿ ಬಂದಂಥ ಚೀನ ನೌಕೆ, ಬೇಕು ಎಂದೇ ಅಮೆರಿಕದ ನೌಕೆಯ ಮಾರ್ಗ ಸಮೀಪಿಸಿ ಢಿಕ್ಕಿ ಹೊಡೆಯಲು ಯತ್ನಿಸಿದೆ. ಆದರೆ ಅಮೆರಿಕ ನೌಕೆ ವೇಗ ಕಡಿಮೆ ಮಾಡಿದ್ದರಿಂದ ಸಂಘರ್ಷ ತಪ್ಪಿದೆ.