ಮಾದಕ ವಸ್ತು ಮಾರಾಟ ದಂಧೆಯಲ್ಲಿ ತೊಡಗಿದ್ದ ಜಾರ್ಖಂಡ್ನ ಮೂವರು ಮಹಿಳೆಯರನ್ನು ಪುಲಿಕೇಶಿ ನಗರ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಪ್ರೇಮ, ಸುನಿತಾ ಹಾಗೂ ಮನೆಯೊಡತಿ ಮುತ್ಯಾಲಮ್ಮ ಬಂಧಿತರು ಎಂದು ಗುರುತಿಸಲಾಗಿದೆ. ಮುತ್ಯಾಲಮ್ಮ ಮನೆಯಲ್ಲಿ ಪ್ರೇಮ್ ಹಾಗೂ ಸುನಿತಾ ಅವರು ಬಾಡಿಗೆಗೆ ಇದ್ದರು. ಜಾರ್ಖಂಡ್ನ ಗುಡ್ಡಗಾಡು ಪ್ರದೇಶದಲ್ಲಿಇವರು ಗಾಂಜಾ ಬೆಳೆಯುತ್ತಿದ್ದರು. ಸಣ್ಣ ಸಣ್ಣ ಪೊಟ್ಟಣಗಳಲ್ಲಿ ಗಾಂಜಾ ಇಟ್ಟು ಪುಲಕೇಶಿ ನಗರದ ಸುತ್ತಮುತ್ತಲಿನ ಗ್ರಾಹಕರಿಗೆ ಮಾರಾಟ ಮಾಡುತ್ತಿದ್ದರು. ಒಂದು ಗ್ರಾಂಗೆ 500 ರೂಪಾಯಿವರೆಗೂ ಹಣ ಸಂಪಾದನೆ ಮಾಡುತ್ತಿದ್ದರು. ಇವರು ಮಾಡುತ್ತಿದ್ದ ಗಾಂಜಾ ದಂಧೆಗೆ ಮಾಲಕಿ ಸಾಥ್ ನೀಡುತ್ತಿದ್ದಳು. ಹೀಗಾಗಿ ಬಾಡಿಗೆ ಪಡೆಯದೇ ಮನೆಯನ್ನು ಉಚಿತವಾಗಿ ನೀಡಿದ್ದಳು. ಮಾದಕ ವಸ್ತು ಮಾರಾಟದಿಂದ ಬಂದ ಅಕ್ರಮ ಹಣದಲ್ಲಿ ಪಾಲು ಪಡೆಯುತ್ತಿದ್ದಳು ಎಂದು ತಿಳಿದು ಬಂದಿದೆ. ಹೀಗಾಗಿ ಖಚಿತ ಮಾಹಿತಿ ಆಧರಿಸಿ ಆರೋಪಿತರನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.