ಮಾದಕ ವಸ್ತುಗಳ ಮಾರಾಟ ಜಾಲವನ್ನು ಬುಡಸಮೇತ ಕಿತ್ತೆಸೆಯಲು ಬೆಂಗಳೂರು ಪೊಲೀಸರು ಟೊಂಕ ಕಟ್ಟಿ ನಿಂತಿದ್ದಾರೆ. ಹೀಗಾಗಿ ಶಾಲಾ-ಕಾಲೇಜುಗಳ ಬಳಿ ಮಾದಕವಸ್ತು ತಡೆಗೆ ಸಮರ ಸಾರಿದ್ದಾರೆ. ಶಾಲೆ-ಕಾಲೇಜುಗಳಿಂದಲೇ ಡ್ರಗ್ಸ್ ಕಂಟ್ರೋಲ್ ಮಾಡಲು ಪೊಲೀಸರು ಪ್ಲಾನ್ ಮಾಡಿದ್ದಾರೆ. ಆಯಾ ಠಾಣಾ ವ್ಯಾಪ್ತಿಯ ಶಾಲಾ-ಕಾಲೇಜುಗಳ ಪಿಟಿ ಮಾಸ್ಟರ್ ಅಥವಾ ಹೆಡ್ಮಾಸ್ಟರ್ ಅವರನ್ನ ನೋಡಲ್ ಆಫೀಸರ್ ಆಗಿ ನೇಮಿಸಲು ಮುಂದಾಗಿದ್ದಾರೆ. ಶಾಲಾ ಅವದಿಯಲ್ಲಿ ಮತ್ತು ಬಳಿಕ ಶಾಲೆಯ ಸುತ್ತಮುತ್ತ ಅಂಗಡಿಗಳು, ಸಂದೇಹಾಸ್ಪದ ಸ್ಥಳಗಳ ಮೇಲೆ ಹಾಗೂ ವಿದ್ಯಾರ್ಥಿಗಳ ಚಟುವಟಿಕೆ ಮೇಲೆ ನಿಗಾ ಇಡಬೇಕು. ವಿದ್ಯಾರ್ಥಿಗಳ ಓಡಾಟ, ಎಲ್ಲೆಲ್ಲಿ ಓಡಾಡ್ತರೆ, ಶಾಲೆಯ ಹೊರಗೆ ಯಾರನ್ನ ಭೇಟಿಯಾಗ್ತಾರೆ ಎಂಬುವುದರ ಬಗ್ಗೆ ಗಮನ ಇಡಬೇಕು. ಅನುಮಾನಸ್ಪದ ವ್ಯಕ್ತಿಗಳು ಶಾಲಾ-ಕಾಲೇಜು ಬಳಿ ಕಂಡುಬಂದರೇ ಮಾಹಿತಿ ನೀಡಬೇಕು. ಅವರು ನಿತ್ಯ ಬರುತ್ತಾರಾ? ಒಂದು ದಿನ ಮಾತ್ರ ಬಂದಿದ್ದರಾ? ವಾರಕ್ಕೆ ಎಷ್ಟು ಬಾರಿ ಬರುತ್ತಾರೆ ಅನ್ನೋದನ್ನ ಗಮನಿಸಬೇಕು ಎಂದು ಪಿಟಿ ಮಾಸ್ಟರ್ ಅಥವಾ ಹೆಡ್ ಮಾಸ್ಟರ್ಗಳಿಗೆ ಸೂಚಿಸಿದ್ದಾರೆ.