ಎಕ್ಸ್’ಟೆಸಿ ಪಿಲ್ಸ್ ಮಾರಾಟ ಮಾಡಲು ಯತ್ನಿಸಿದ ಆರೋಪಿ ಅರೆಸ್ಟ್

ಮಾದಕವಸ್ತು ಮಾರಾಟದಲ್ಲಿ ತೊಡಗಿದ್ದ ಮದ್ಯ ಮತ್ತು ಮಾದಕವಸ್ತು ವ್ಯಸನ ಮುಕ್ತಿ ಕೇಂದ್ರದ ಮುಖ್ಯಸ್ಥನನ್ನು ಬೆಂಗಳೂರಿನ ಗಿರಿನಗರ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಸುಹಾಸ್ ಬಂಧಿತ ಆರೋಪಿ ಎಂದು ಗುರುತಿಸಲಾಗಿದೆ. ಆರೋಪಿಯು, ಹೆಸರಿಗೆ ಮಾತ್ರ ಕೆಂಗೇರಿಯಲ್ಲಿ‌ ಮದ್ಯ,ಮಾದಕವ್ಯಸನ ಮುಕ್ತಿ ಕೇಂದ್ರ ನಡೆಸುತ್ತಿದ್ದ. ಆದರೆ ಈತನೇ ಎಕ್ಸ್’ಟೆಸಿ ಪಿಲ್ಸ್ ಮಾರಾಟದಲ್ಲಿ ತೊಡಗಿದ್ದ. ವ್ಯಸನವನ್ನ ಬಿಡಲೆಂದು ಕೇಂದ್ರಕ್ಕೆ ಬಂದವರಿಗೆ ವ್ಯಸನ ಇರೋದನ್ನೆ ಬಂಡವಾಳ ಮಾಡಿಕೊಂಡಿದ್ದ. ಇದೀಗ ಗಿರಿನಗರ ಪೊಲೀಸರ ಅತಿಥಿ ಆಗಿದ್ದಾನೆ. ಹೊಸಕೆರೆಹಳ್ಳಿ ಬಳಿ ಎಕ್ಸ್’ಟೆಸಿ ಪಿಲ್ಸ್ ಮಾರಾಟ ಮಾಡಲು ಯತ್ನಿಸಿದ ವೇಳೆ ಖಚಿತ ಮಾಹಿತಿ ಆಧರಿಸಿ ಆರೋಪಿಯನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಇನ್ನೂ ಆರೋಪಿ ವಿರುದ್ಧ ಗಿರಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರಿಂದ ತನಿಖೆ ಮುಂದುವರಿದಿದೆ.

Loading

Leave a Reply

Your email address will not be published. Required fields are marked *