ಭೋಪಾಲ್: ಮಧ್ಯಪ್ರದೇಶದ ಸಿಎಂ ಶಿವರಾಜ್ ಸಿಂಗ್ ಚೌಹಾಣ್ (Shivraj Singh Chouhan) ಅವರ ನೇತೃತ್ವದಲ್ಲಿ ನಡೆದ ಸಾಮೂಹಿಕ ವಿವಾಹ ಮಹೋತ್ಸವ ಸಮಾರಂಭದಲ್ಲಿ ವಧು-ವರರಿಗೆ ಕಾಂಡೋಮ್‌ಗಳು, ಗರ್ಭನಿರೋಧಕ ಮಾತ್ರೆಗಳು (Contraceptive Pills) ಮತ್ತು ಮೇಕಪ್ ಬಾಕ್ಸ್‌ಗಳಿರುವ ಕಿಟ್‌ಗಳನ್ನು ನೀಡಲಾಗಿದೆ
ಹೌದು. ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರು ಕನ್ಯಾ ವಿವಾಹ/ನಿಕಾಹ್ ಯೋಜನೆ ಅಡಿಯಲ್ಲಿ ಆರ್ಥಿಕ ದುರ್ಬಲ ವರ್ಗದ ಮಹಿಳೆಯರಿಗಾಗಿ ಸಾಮೂಹಿಕ ವಿವಾಹ ಕಾರ್ಯಕ್ರಮ (Wedding Event) ಆಯೋಜಿಸಿದ್ದರು. ಈ ವೇಳೆ ನೂತನ ವಧುವರರಿಗೆ ವಿತರಿಸಲಾದ ಕಿಟ್‌ನಲ್ಲಿ ಕಾಂಡೋಮ್ ಹಾಗೂ ಗರ್ಭನಿರೋಧಕ ಮಾತ್ರೆಗಳೂ ಇತ್ತು. ಆದ್ರೆ ಈ ಬಗ್ಗೆ ಕೇಳಿದಾಗ ಜಿಲ್ಲಾ ಹಿರಿಯ ಅಧಿಕಾರಿ ಭೂರಸಿಂಗ್ ರಾವತ್, ಕುಟುಂಬ ಯೋಜನೆಗೆ ಸಂಬಂಧಿಸಿದ ಜಾಗೃತಿ ಕಾರ್ಯಕ್ರಮದ ಭಾಗವಾಗಿ ಆರೋಗ್ಯಾಧಿಕಾರಿಗಳು ಕಾಂಡೋಮ್ ಮತ್ತು ಗರ್ಭನಿರೋಧಕ ಮಾತ್ರೆಗಳನ್ನ ವಿತರಿಸಿರಬಹುದು ಎಂದು ಹೇಳಿದ್ದಾರೆ.
ಕಾಂಡೋಮ್ ಮತ್ತು ಗರ್ಭನಿರೋಧಕ ಮಾತ್ರೆಗಳನ್ನು ವಿತರಿಸಿರೋದಕ್ಕೆ ನಾವು ಜವಾಬ್ದಾರರಲ್ಲ. ಇದು ಆರೋಗ್ಯ ಇಲಾಖೆ ಕುಟುಂಬ ಯೋಜನೆಯ ಜಾಗೃತಿ ಕಾರ್ಯಕ್ರಮ ಆಗಿರಬಹುದು. ನಾವು ನೇರವಾಗಿ 49 ಸಾವಿರ ರೂ.ಗಳನ್ನ ಫಲಾನುಭವಿಗಳ ಖಾತೆಗೆ ವರ್ಗಾಯಿಸುತ್ತೇವೆ. ಜೊತೆಗೆ ಅವರ ಆಹಾರ, ನೀರು ಹಾಗೂ 6 ಸಾವಿರ ಮೌಲ್ಯದ ಟೆಂಟ್ ವಸತಿ ಕಲ್ಪಿಸುವ ವ್ಯವಸ್ಥೆ ಜವಾಬ್ದಾರಿ ತೆಗೆದುಕೊಂಡಿದ್ದೇವೆ. ಆದ್ರೆ ವಧು-ವರರಿಗೆ ವಿತರಿಸಿದ ಮೇಕಪ್ ಬಾಕ್ಸ್ಗಳಲ್ಲಿ ಏನಿತ್ತು ಎಂಬುದು ನಮಗೆ ಗೊತ್ತೇ ಇಲ್ಲ ಎಂದು ರಾವತ್ ಸ್ಪಷ್ಟನೆ ನೀಡಿದ್ದಾರೆ.
2006ರ ಏಪ್ರಿಲ್‌ನಲ್ಲಿ ಮಧ್ಯಪ್ರದೇಶ ಸರ್ಕಾರವು ಕನ್ಯಾ ವಿವಾಹ/ನಿಹಾಕ್ ಯೋಜನೆಯನ್ನ ಆರಂಭಿಸಿತು. ಆರ್ಥಿಕ ದುರ್ಬಲ ವರ್ಗದ ಮಹಿಳೆಯರ ವಿವಾಹಗಳಿಗೆ ಹಣಕಾಸು ನೆರವು ನೀಡುವುದು ಈ ಯೋಜನೆಯ ಉದ್ದೇಶವಾಗಿದೆ. ಈ ಯೋಜನೆ ಅಡಿಯಲ್ಲಿ ಸರ್ಕಾರವು ವಧುವಿನ ಕುಟುಂಬಕ್ಕೆ 55 ಸಾವಿರ ರೂ. ನೆರವು ನೀಡುತ್ತದೆ.