ಶಾಂತಿ ಮತ್ತು ನೆಮ್ಮದಿಗೆ ರಾಜತಾಂತ್ರಿಕ ಮಾತುಕತೆಗಳನ್ನು ನಡೆಸಿದ ಭಾರತ-ಚೀನಾ

ವದೆಹಲಿ: ಭಾರತ (India) ಮತ್ತು ಚೀನಾ (China) ನಡುವಿನ ಗಡಿಯಲ್ಲಿ ಶಾಂತಿ ಸ್ಥಾಪನೆಗಾಗಿ ಎರಡೂ ದೇಶಗಳು ಮಾತುಕತೆ ನಡೆಸಿವೆ. ಅಲ್ಲದೆ ಮಿಲಿಟರಿ ಹಾಗೂ ರಾಜತಾಂತ್ರಿಕ ಚರ್ಚೆಗಳನ್ನು ಮುಂದುವರಿಸಲು ಉಭಯ ರಾಷ್ಟ್ರಗಳು ಒಪ್ಪಿಕೊಂಡಿವೆ.

ಪೂರ್ವ ಲಡಾಖ್‍ನ (Ladakh) ಗಡಿ ನಿಯಂತ್ರಣ ರೇಖೆಯ (LAC) ಉದ್ದಕ್ಕೂ ಎದ್ದಿರುವ ವಿವಾದಗಳನ್ನು ಮುಕ್ತವಾಗಿ ಚರ್ಚಿಸಿ ಸ್ಪಷ್ಟತೆ ಕಂಡುಕೊಳ್ಳಲು ಎರಡು ದೇಶಗಳು ತಿರ್ಮಾನಿಸಿವೆ.

ಶಾಂತಿ ಮತ್ತು ನೆಮ್ಮದಿಯ ಮರುಸ್ಥಾಪನೆ ಈ ಮಾತುಕತೆಯ ಉದ್ದೇಶವಾಗಿದೆ. ಈ ಬಗ್ಗೆ ಮುಂದಿನ ಸುತ್ತಿನ ಮಿಲಿಟರಿ ಮಾತುಕತೆಗಳನ್ನು ನಡೆಸಲು ತೀರ್ಮಾನಿಸಲಾಗಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ (Ministry of External Affairs) ತಿಳಿಸಿದೆ. ಚರ್ಚೆಯ ವೇಳೆ ಭಾರತ-ಚೀನಾ ಗಡಿಯ ಪಶ್ಚಿಮ ವಲಯದ ಎಲ್‍ಎಸಿಯ ಉದ್ದಕ್ಕೂ ಪರಿಸ್ಥಿತಿಯನ್ನು ಪರಿಶೀಲಿಸಲಾಯಿತು.

ಉಳಿದ ಪ್ರದೇಶಗಳ ಪರಿಸ್ಥಿತಿಯನ್ನು ಶೀಘ್ರದಲ್ಲೇ ಪರಿಶೀಲಿಸಿ ಸೂಕ್ತ ಮಾತುಕತೆ ಮೂಲಕ ಸಮಸ್ಯೆಯನ್ನು ಬಗೆಹರಿಸಿಕೊಳ್ಳಲು ತಿರ್ಮಾನಿಸಲಾಯಿತು. ಮುಂದಿನ ಚರ್ಚೆ ಎರಡೂ ದೇಶಗಳ ಸಂಬಂಧದಲ್ಲಿ ವಿಶ್ವಾಸ ಮೂಡಿಸುವ ಭರವಸೆಯನ್ನು ಎರಡೂ ರಾಷ್ಟ್ರಗಳು ವ್ಯಕ್ತಪಡಿಸಿವೆ. ಈಗಾಗಲೇ ಅಸ್ತಿತ್ವದಲ್ಲಿರುವ ದ್ವಿಪಕ್ಷೀಯ ಒಪ್ಪಂದಗಳು ಮತ್ತು ಪ್ರೋಟೋಕಾಲ್‌ಗೆ ಅನುಗುಣವಾಗಿ ಮುಂದಿನ (19 ನೇ) ಸುತ್ತಿನ ಹಿರಿಯ ಕಮಾಂಡರ್ ಸಭೆಯನ್ನು ನಡೆಸಲಾಗುವುದು ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿಳಿಸಿದೆ.

Loading

Leave a Reply

Your email address will not be published. Required fields are marked *