ಜಮ್ಮು ಮತ್ತು ಕಾಶ್ಮೀರಕ್ಕೆ ನುಸುಳಲು ಯತ್ನಿಸುತ್ತಿದ್ದ ಪಾಕ್ ವ್ಯಕ್ತಿಯ ಹತ್ಯೆ

ಮ್ಮು ಮತ್ತು ಕಾಶ್ಮೀರ(Jammu and Kashmir)ದ ಸಾಂಬಾದಲ್ಲಿ ಒಳನುಸುಳಲು ಯತ್ನಿಸುತ್ತಿದ್ದ ಪಾಕಿಸ್ತಾನದ ನುಸುಳು ಕೋರನನ್ನು ಸೈನಿಕರು ಹೊಡೆದುರುಳಿಸಿದ್ದಾರೆ. ಸಾಂಬಾ ಪ್ರದೇಶದಲ್ಲಿ ಅಕ್ರಮವಾಗಿ ಗಡಿ ಪ್ರವೇಶಕ್ಕೆ ಯತ್ನಿಸುತ್ತಿದ್ದ ಎನ್ನಲಾಗಿದೆ. ಮೂಲಗಳ ಪ್ರಕಾರ, ಪಾಕಿಸ್ತಾನದಿಂದ ನಿರಂತರ ಒಳನುಸುಳುವಿಕೆ ಪ್ರಯತ್ನಗಳ ಬಗ್ಗೆ ಮಾಹಿತಿ ಪಡೆದ ನಂತರ ಭದ್ರತಾ ಪಡೆಗಳಿಗೆ ಎಚ್ಚರಿಕೆ ನೀಡಲಾಗಿದೆ.

ಬುಧವಾರ ತಡರಾತ್ರಿ ಐಬಿಯಲ್ಲಿ ಕೆಲವು ಚಲನವಲನಗಳನ್ನು ಯೋಧರು ಗಮನಿಸಿದ್ದಾರೆ. ಹಾಗಾಗಿ ಅಲರ್ಟ್​ ಆಗಿದ್ದರು. ಆ ವ್ಯಕ್ತಿಯ ಬಳಿ ಎಷ್ಟೇ ಪ್ರಶ್ನೆ ಮಾಡಿದರು ಉತ್ತರಿಸದೆ ಮುನ್ನುಗ್ಗುತ್ತಿದ್ದ ಹೀಗಾಗಿ ಹತ್ಯೆ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಎರಡು ದಿನಗಳ ಹಿಂದೆ ಪೂಂಚ್​ನಲ್ಲಿ ಸುಮಾರು ಒಂದೂವರೆ ಗಂಟೆಗಳ ಕಾಲ ನಡೆದ ಗುಂಡಿನ ಚಕಮಕಿಯಲ್ಲಿ ಓರ್ವ ಭಯೋತ್ಪಾದಕ ಗಾಯಗೊಂಡಿದ್ದ ಆತನಿಂದ ಎಕೆ 56 ರೈಫಲ್, ಎರಡು ಪಿಸ್ತೂಲ್, ಆರು ಗ್ರೆನೇಡ್ ಮತ್ತು 30 ಕೆಜಿ ಹೆರಾಯಿನ್ ವಶಪಡಿಸಿಕೊಳ್ಳಲಾಗಿತ್ತು.

Loading

Leave a Reply

Your email address will not be published. Required fields are marked *