ಮದುವೆಯಾಗದೇ ಮಗುವನ್ನು ಪಡೆಯುವ ಆಸೆ ಇತ್ತು ಎಂದ ನಟ ಸಲ್ಮಾನ್‌ ಖಾನ್‌

ಬಾಲಿವುಡ್ ನ ಎವರ್ ಗ್ರೀನ್ ಬ್ಯಾಚುಲರ್ ನಟ ಸಲ್ಮಾನ್ ಖಾನ್ ಸಾಕಷ್ಟು ನಟಿಯರೊಂದಿಗೆ ಡೇಟಿಂಗ್ ಮಾಡಿದ್ರು ಯಾರನ್ನೂ ಕೂಡ ಕೈ ಹಿಡಿಯಲಿಲ್ಲ. ಆದರೆ ಸಲ್ಲು ಬಾಯ್ ತಂದೆಯಾಗುವ ಆಸೆ ಬಗ್ಗೆ ಇತ್ತೀಚಿನ ಸಂದರ್ಶನವೊಂದರಲ್ಲಿ ಮಾತನಾಡಿದ್ದಾರೆ. ‘ಕಿಸಿ ಕಾ ಭಾಯ್ ಕಿಸಿ ಕಿ ಜಾನ್’ ಚಿತ್ರದ ಸೋಲಿನ ನಂತರ ಸಂದರ್ಶನವೊಂದರಲ್ಲಿ ತಾನು ಮಗುವನ್ನು ಹೊಂದುವ ಬಗ್ಗೆ ಯೋಚಿಸಿದ್ದೆ ಎಂದು ಸಲ್ಮಾನ್ ಹೇಳಿಕೊಂಡಿದ್ದಾರೆ.

ಬಾಲಿವುಡ್ ನ ಸ್ಟಾರ್ ನಟ ಸಲ್ಮಾನ್ ಖಾನ್ ನಟನೆಯ ಸಿನಿಮಾಗಳು ಇತ್ತೀಚೆಗೆ ಬಾಕ್ಸ್ ಆಫೀಸ್ ನಲ್ಲಿ ಮಕಾಡೆ ಮಲಗುತ್ತಿವೆ. ಆದರೂ ಸಲ್ಮಾನ್ ಖಾನ್‌ಗೆ ಇರುವ ಬೇಡಿಕೆ ಮಾತ್ರ ಕಮ್ಮಿಯಾಗಿಲ್ಲ. ಒಂದಲ್ಲಾ ಒಂದು ವಿಭಿನ್ನ ಪ್ರಯತ್ನಗಳ ಮೂಲಕ ಸಲ್ಮಾನ್ ಪ್ರೇಕ್ಷಕರ ಮುಂದೆ ಬರುತ್ತಲೆ ಇದ್ದಾರೆ.

ಇತ್ತೀಚೆಗೆ ಸಂದರ್ಶನವೊಂದರಲ್ಲಿ ಭಾಗಿಯಾಗಿದ್ದ ಸಲ್ಮಾನ್ ತಂದೆಯಾಗುವ ಆಸೆ ಬಗ್ಗೆ, ಲವ್ ಲೈಫ್ ಬಗ್ಗೆ ಸಲ್ಮಾನ್ ಖಾನ್ ಮುಕ್ತವಾಗಿ ಮಾತನಾಡಿದ್ದಾರೆ. ಸಲ್ಮಾನ್‌ಗೆ ಮಕ್ಕಳೆಂದರೆ ತುಂಬಾ ಇಷ್ಟ. ಸಹೋದರ- ಸಹೋದರಿಯ ಮಕ್ಕಳ ಜೊತೆ ಹೆಚ್ಚಿನ ಸಮಯ ಕಳೆಯುತ್ತಾರೆ. ಇದೀಗ ತಾವು ಮಗುವನ್ನು ಪಡೆಯುವ ಬಗ್ಗೆ ಯೋಚಿಸಿದ್ದೆ, ಮಕ್ಕಳು ಪಡೆಯಬೇಕು ಎಂಬುದು ನನ್ನಾಸೆಯಾಗಿತ್ತು. ಆದರೆ ಭಾರತದ ಕಾನೂನಿನ ಪ್ರಕಾರ ಅದು ಸಾಧ್ಯವಿಲ್ಲ. ಈಗ ಆ ಕಾನೂನು ಬದಲಾಗಿರಬಹುದು. ನನಗೆ ಮಕ್ಕಳೆಂದರೆ ಇಷ್ಟ ಎಂದು ಸಲ್ಮಾನ್ ಖಾನ್ ಹೇಳಿದ್ದಾರೆ.

ನಾನು ಲವ್ ಮಾಡಿದವ್ರೆಲ್ಲಾ ನನ್ನ ಅಣ್ಣ ಅಂತಾರೆ. ‘ಲವ್‌ನಲ್ಲಿ ನನಗೆ ಲಕ್ ಇಲ್ಲʼ ಎಂದು ಲವ್ ಲೈಫ್ ಬಗ್ಗೆ ಸಲ್ಮಾನ್ ಖಾನ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Loading

Leave a Reply

Your email address will not be published. Required fields are marked *